ಶುಕ್ರವಾರ, ಅಕ್ಟೋಬರ್ 23, 2020
21 °C

ಸತ್ಸಂಗ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಪ್ರತಿಯೊಬ್ಬರೂ ಪ್ರೀತಿ, ವಿಶ್ವಾಸದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು’ ಎಂದು ಸತ್ಸಂಗದ ಅಧ್ಯಕ್ಷ ಜೆ.ಎಸ್. ರಾಮಚಂದ್ರಪ್ಪ ಸಲಹೆ ನೀಡಿದರು.

ಇಲ್ಲಿನ ರಾಯಲ್ ಪಬ್ಲಿಕ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಕಲಿಯಬೇಕು. ಆಡಂಬರದ ಭಕ್ತಿಯಿಂದ ಯಾವುದೇ ಪ್ರಯೋಜನವಿಲ್ಲ. ಸತ್ಯದ ಹಾದಿಯಲ್ಲಿ ಸಾಗಬೇಕು. ಧರ್ಮದ ನಡೆಯಲ್ಲಿಯೇ ಪಯಣಿಸಬೇಕು. ಎಲ್ಲರಲ್ಲೂ ವಿವೇಚನಾ ಶಕ್ತಿ ಇದೆ. ಆದರೆ ಸಾವಿರಾರು ಬಗೆಯ ಮನಸ್ಸುಗಳ ನಡುವೆ ಹೊಂದಿಕೊಂಡು ಜೀವಿಸುವಾಗ ತಪ್ಪುಗಳು ಸಂಭವಿಸಬಹುದು. ಅಂತಹ ಸಂದರ್ಭದಲ್ಲಿ ಮನಸ್ಸನ್ನು ಗಟ್ಟಿ ಮಾಡಿಕೊಂಡು ಸಮಚಿತ್ತದಿಂದ ವರ್ತಿಸಬೇಕಿದೆ’ ಎಂದರು.

‘ಸಮಚಿತ್ತದಿಂದ ಬದುಕಲು ಏಕಾಗ್ರತೆಯ ಅವಶ್ಯಕತೆಯಿದೆ. ಭಕ್ತಿಯೇ ಇದಕ್ಕೆ ಪೂರಕ ಸಾಧನ’ ಎಂದರು.

ಗೋಪಾಲಪ್ಪ ಮತ್ತು ಅರ್ಚಕ ರಮೇಶ್ ಸ್ವಾಮೀಜಿ ಮಾತನಾಡಿದರು. ಎಂ.ವಿ. ನಾಯ್ಡು, ಮಹಾತ್ಮಾಂಜನೇಯ, ನರಸಿಂಹಪ್ಪ, ನಾಗಯ್ಯ ತಂಡದಿಂದ ಭಕ್ತಿಗೀತೆಗಳ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ಸತ್ಸಂಗದ ಉಪಾಧ್ಯಕ್ಷ ಪಿ. ನಾರಾಯಣಪ್ಪ, ವಿ.ಎನ್. ವೆಂಕಟೇಶ್, ನಾಗರಾಜಶೆಟ್ಟಿ, ಎನ್. ನಾರಾಯಣಸ್ವಾಮಿ, ಮುನಿರಾಜು, ಗೋವಿಂದರಾಜು, ವಿ.ಎನ್. ರಮೇಶ್, ಶಿವಣ್ಣ, ಮುನಿನಾರಾಯಣಪ್ಪ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.