ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಮ್ಮರಾಯಸ್ವಾಮಿ ಸರಳ ರಥೋತ್ಸವ

Last Updated 20 ಏಪ್ರಿಲ್ 2021, 3:17 IST
ಅಕ್ಷರ ಗಾತ್ರ

ಆನೇಕಲ್: ಪಟ್ಟಣದ ಅಧಿದೈವ ತಿಮ್ಮರಾಯಸ್ವಾಮಿ ದೇವಾಲಯ ಬ್ರಹ್ಮರಥೋತ್ಸವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೆಲವೇ ಜನರ ಸಮ್ಮುಖದಲ್ಲಿ ಸರಳ ಮತ್ತು ಸಾಂಪ್ರದಾಯಿಕ ಆಚರಣೆಗಳೊಂದಿಗೆ ಸೋಮವಾರ ನಡೆಸಲಾಯಿತು.

ಬ್ರಹ್ಮರಥೋತ್ಸವದ ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದ ಅರ್ಚಕರು ಧಾರ್ಮಿಕ ಆಚರಣೆಳನ್ನು ಪೂರ್ಣಗೊಳಿಸಿದ ನಂತರ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಭಕ್ತರು ಹೊತ್ತು ತಂದು ಅಲಂಕೃತ ರಥದಲ್ಲಿ ಕುಳ್ಳರಿಸಲಾಗಿತ್ತು. ಪ್ರಾಂಗಣದಲ್ಲಿ ರಥವನ್ನು ಎತ್ತುಗಳ ಮೂಲಕ ಎಳೆಸಲಾಯಿತು. ಪ್ರಧಾನ ಅರ್ಚಕ ರಾಮಚಂದ್ರಭಟ್ ಅವರು ಧಾರ್ಮಿಕ ಆಚರಣೆಗಳ ನೇತೃತ್ವ ವಹಿಸಿದ್ದರು.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರಥೋತ್ಸವ ಸಂಭ್ರಮಕ್ಕೆ ಕಡಿವಾಣ ಬಿದ್ದಿತ್ತು. ದೊಡ್ಡ ರಥವು ಆಕರ್ಷಣೆಯಾಗಿರುತ್ತಿತ್ತು ಆದರೆ ಈ ವರ್ಷ ಚಿಕ್ಕರಥವನ್ನು ಬೆರಳೆಣಿಕೆಯಷ್ಟು ಭಕ್ತರ ಸಮ್ಮುಖದಲ್ಲಿ ಎಳೆಯಲಾಯಿತು. ಜನಜಂಗುಳಿಯಿಂದ ಮಿಂದೇಳುತ್ತಿದ್ದ ದೇವಾಲಯದ ಆವರಣ ಬಿಕೋ ಎನ್ನುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT