ಜೆಡಿಎಸ್ ಭದ್ರಕೋಟೆ ಛಿದ್ರ
ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಇರುದುವರೆಗೂ ಜೆಡಿಎಸ್ ಭದ್ರಕೋಟೆಯಾಗಿತ್ತು. 15 ವರ್ಷ ಜೆಡಿಎಸ್ ಅಭ್ಯರ್ಥಿಗಳೇ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಆದರೆ, ಕ್ಷೇತ್ರದಲ್ಲಿ ಬದಲಾದ ರಾಜಕೀಯ, ತಾಲ್ಲೂಕು ಮುಖಂಡರಲ್ಲಿ ಕಾಣದ ಒಗ್ಗಟ್ಟು ಹಾಗೂ ಸಂಘಟನೆ ಕೊರತೆಯಿಂದ ಜೆಡಿಎಸ್ ಕೋಟೆ ಛಿದ್ರವಾಗಿದೆ. ಜೆಡಿಎಸ್ ಒಬ್ಬ ಅಭ್ಯರ್ಥಿ ಮಾತ್ರ ಜಯಗಳಿಸಿ ಪಕ್ಷದ ಮರ್ಯಾದೆ ಉಳಿಸಿದ್ದಾರೆ.