ದೇವನಹಳ್ಳಿ: ಬೆಂಗಳೂರು–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ–44ರಲ್ಲಿ ಸೋಮವಾರ ಬೆಳಗ್ಗೆಯೇ ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್ಗಳ ತಪಾಸಣೆ ನಡೆಸಿದರು. ಈ ವೇಳೆ ನಿಯಮ ಮೀರಿ ಸಂಚರಿಸಿದ್ದ ಅಂತರರಾಜ್ಯ ಬಸ್ಗಳಿಂದ ಒಟ್ಟು ₹16,700 ದಂಡ ವಸೂಲಿ ಮಾಡಲಾಗಿದೆ.

ದೇವನಹಳ್ಳಿ ಎಆರ್ಟಿಒ ಸುಧೀರ್ ಅವರ ನೇತೃತ್ವದಲ್ಲಿ ರಾಣಿಕ್ರಾಸ್ ಬಳಿ ಕಾರ್ಯಾಚರಣೆ ನಡೆಯಿತು. ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಸ್ಲೀಪರ್ ಕೋಚ್ ಸೇರಿದಂತೆ ಹಲವು ಬಸ್ಗಳನ್ನು ತಡೆದು ಪರಿಶೀಲನೆ ಮಾಡಲಾಯಿತು.

ಬೆಳಗ್ಗೆಯೇ ಬಸ್ಗಳನ್ನು ತಡೆದ ಕಾರಣ ಕೆಲ ಪ್ರಯಾಣಿಕರಿಗೆ ತೊಂದರೆ ಆದರೂ, ಅವರನ್ನು ಬೆಂಗಳೂರಿಗೆ ಕಳುಹಿಸಲು ಬೇರೆ ಬಸ್ಗಳ ವ್ಯವಸ್ಥೆ ಮಾಡಲಾಯಿತು.

ಬಸ್ಗಳಲ್ಲಿ ಹೆಚ್ಚುವರಿ ಲಗೇಜ್ ಸಾಗಣೆ, ಟ್ಯಾಕ್ಸ್ ಪಾವತಿ, ಅಂತರರಾಜ್ಯ ನೋಂದಣಿ ದಾಖಲೆಗಳು ಹಾಗೂ ಚಾಲಕರ ಲೈಸೆನ್ಸ್ ಪರಿಶೀಲಿಸಲಾಯಿತು. ತೆರಿಗೆ ಪಾವತಿಸದೆ ಓಡಿಸುತ್ತಿದ್ದ ಹಾಗೂ ನಿಯಮ ಉಲ್ಲಂಘಿಸಿದ್ದ ಬಸ್ಗಳಿಗೆ ದಂಡ ಹಾಕಲಾಗಿದ್ದು, ಕೆಲ ಗಂಭೀರ ಪ್ರಕರಣಗಳಲ್ಲಿ ಬಸ್ಗಳನ್ನು ಜಪ್ತಿ ಕೂಡ ಮಾಡಲಾಯಿತು.

ರಸ್ತೆ ಸುರಕ್ಷತೆ ಕಾಪಾಡುವ ಉದ್ದೇಶದಿಂದ ಇಂತಹ ತಪಾಸಣೆ ಮುಂದೆಯೂ ನಡೆಯಲಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.