ಗುರುವಾರ , ನವೆಂಬರ್ 21, 2019
20 °C

ಬಳಕೆಗೆ ಬಾರದ ಕಸದ ವಾಹನಗಳು

Published:
Updated:
Prajavani

ವಿಜಯಪುರ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡುಗಳಲ್ಲಿ ದಿನನಿತ್ಯ ಉತ್ಪತ್ತಿಯಾಗುತ್ತಿರುವ ಹಸಿ ಕಸ ಮತ್ತು ಒಣ ಕಸವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಾಹನಗಳು ನಿರ್ವಹಣೆಗೆ ಇನ್ನೂ ಬಳಕೆಯಾಗಿಲ್ಲ.

ಪುರಸಭೆಗೆ 14 ನೇ ಹಣಕಾಸು ಯೋಜನೆಯಡಿ ಒಂದೊಂದು ಟಾಟಾ ಏಸ್ ಲಗೇಜ್‌ ವಾಹನಕ್ಕೆ ₹ 5.2 ಲಕ್ಷದಂತೆ ₹ 25 ಲಕ್ಷ ವೆಚ್ಚದಲ್ಲಿ 5 ವಾಹನಗಳು ಖರೀದಿ ಮಾಡಿಕೊಂಡು ಬಂದಿದ್ದಾರೆ. ಈ ವಾಹನಗಳ ಗುಣಮಟ್ಟ ಪರೀಕ್ಷೆ ಮಾಡಬೇಕಾಗಿರುವ ನಗರಾಭಿವೃದ್ಧಿ ಕೋಶದ ಮೂರನೇ ಪಾರ್ಟ್ ತಪಾಸಣಾಗಾರರು ಗಮನಹರಿಸದ ಹಿನ್ನೆಲೆಯಲ್ಲಿ ಒಂದು ತಿಂಗಳಿನಿಂದ ನೂತನ ಕಸಸಾಗಾಣಿಕೆ ತಂದಿರುವ ವಾಹನಗಳು ಬಿಸಿಲು, ಮಳೆಗೆ ಮೈಯೊಡ್ಡಿ ನಿಂತಿದ್ದು, ಪುರಸಭೆಗೆ ನಷ್ಟವುಂಟಾಗುವಂತಾಗಿದೆ ಎಂದು ಮುಖಂಡ ಹರೀಶ್ ಆರೋಪಿಸಿದರು.

ಪುರಸಭೆಯ ವ್ಯಾಪ್ತಿಯಲ್ಲಿರುವ ಜೆಸಿಬಿಗಳು ಕಸಸಾಗಾಣಿಕೆ ಮಾಡುವ ಯಂತ್ರಗಳು, ಟ್ರ್ಯಾಕ್ಟರ್‌ಗಳು, ಆಟೋಗಳು ಸೇರಿದಂತೆ ಯಾವುದೇ ವಾಹನಗಳ ಸುರಕ್ಷತೆಗಾಗಿ ಶೆಡ್‌ಗಳು ನಿರ್ಮಾಣ ಮಾಡಿಲ್ಲದ ಕಾರಣ ಅವೂ ಮಳೆ ಗಾಳಿಗೆ ಸಿಲುಕಿ ಹಾಳಾಗುತ್ತಿವೆ.

ಸಂಬಂಧ ಪಟ್ಟ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ನೂತನ ವಾಹನಗಳ ಕಡೆಗೆ ಗಮನಹರಿಸಿ, ಶೀಘ್ರವಾಗಿ ತಪಾಸಣೆ ನಡೆಸಿ, ನೋಂದಣಿ ಮಾಡಿಸಿ ಉಪಯೋಗಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)