ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ನಲ್ಲೂರಹಳ್ಳಿ: ವೈಕುಂಠ ಏಕಾದಶಿ ವಿಶೇಷ ಪೂಜೆ

Last Updated 7 ಜನವರಿ 2020, 13:09 IST
ಅಕ್ಷರ ಗಾತ್ರ

ಸೂಲಿಬೆಲೆ: ವೈಕುಂಠ ಏಕಾದಶಿ ದಿನ ವಿಷ್ಣುರೂಪಿ ದೇವರನ್ನು ಪೂಜಿಸುತ್ತಾರೋ, ಉಪವಾಸ ಸಮಯದಲ್ಲಿ ಧ್ಯಾನ, ಪೂಜೆ ಭಜನೆ ವಿಷ್ಣು ಸಹಸ್ರನಾಮ ಪಠಿಸಿ ಜಾಗರಣೆ ಮಾಡುತ್ತಾರೋ ಅವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಶ್ರೀಕ್ಷೇತ್ರದ ಸಂಸ್ಥಾಪಕರಾದ ಡಿ.ಎಲ್.ವೀರಬ್ರಹ್ಮಚಾರ್ ಗುರೂಜಿ ತಿಳಿಸಿದರು.

ನಂದಗುಡಿ ಸಮೀಪದ ದೊಡ್ಡ ನಲ್ಲೂರಹಳ್ಳಿ ಶ್ರೀಅಭಯ ಶನೇಶ್ವರ ಸ್ವಾಮಿ ದೇವಾಲಯದ ಶ್ರೀಸನ್ನಿಧಿಯಲ್ಲಿರುವ, ಶ್ರೀ ಕಲ್ಯಾಣ ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತವಾಗಿ ವಿಶೇಷ ಪೂಜಾ ಕೈಂಕರ್ಯಗಳ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬೆಳಗಿನ ಜಾವದಿಂದಲೇ ದೇವಾಲಯದಲ್ಲಿ ದ್ವಾರಪೂಜೆ, ಕೌಮಾಲೆ ಸೇವೆ, ವಸ್ತ್ರಸೇವೆ, ಸುಪ್ರಭಾತ, ಹೋಮ, ಹವನ, ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರಗಳೊಂದಿಗೆ ಶ್ರೀವೆಂಕಟೇಶ್ವರಸ್ವಾಮಿಗೆ ಬೆಣ್ಣೆ ಅಲಂಕಾರ ನಡೆಯಿತು

ಪೂಜಾ ಕಾರ್ಯಕ್ರಮದ ನೇತೃತ್ವವನ್ನು ರವಿಸುತ ಸೇವಾ ಟ್ರಸ್ಟ್ ನ ಪದಾಧಿಕಾರಿಗಳಾದ ಶಿವಕುಮಾರಚಾರ್, ಸಂದೀಪಾಚಾರ್, ಸುರೇಶಚಾರ್, ಪ್ರಭಾಕರಚಾರ್, ಪ್ರಕಾಶಚಾರ್, ಬಸಪ್ಪ, ನಂಜಪ್ಪ ಹಾಗು ಮರಿಯಪ್ಪ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT