ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ವನಮಾಲಿ’ ಕೃತಿ ಬಿಡುಗಡೆ

Published 7 ಜುಲೈ 2024, 16:12 IST
Last Updated 7 ಜುಲೈ 2024, 16:12 IST
ಅಕ್ಷರ ಗಾತ್ರ

ಹೊಸಕೋಟೆ: ಸಾಹಿತಿ ಬಾಗೇಪಲ್ಲಿ ಕೃಷ್ಣಮೂರ್ತಿ ಅವರು ಅನುವಾದದ ರವೀಂದ್ರನಾಥ್ ಟ್ಯಾಗೋರ್ ಅವರ ‘ದಿ ಗಾರ್ಡಿನರ್’ ಕೃತಿಯ ಕನ್ನಡ ಭಾವಾನುವಾದ ‘ವನಮಾಲಿ’ ಪುಸ್ತಕ ಬಿಡುಗಡೆ ನಗರದಲ್ಲಿ ಭಾನುವಾರ ನಡೆಯಿತು.

ವಿಜ್ಞಾನ ವಿಜ್ಞಾನ ಪರಿಷತ್ತಿನ ಮಾಜಿ ಕಾರ್ಯದರ್ಶಿ ಪ್ರೊ.ಎಂ.ಆರ್.ನಾಗರಾಜ್ ಮಾತನಾಡಿ, ಅನುವಾದ ಎಂಬುದು ಕಡು ಕಷ್ಟದ ಕೆಲಸ. ಮೂಲ ಕೃತಿಯಷ್ಟೇ ರಸಾನುಭವವನ್ನು ಅದು ಕೊಡದೆ ಇದ್ದರೂ ಭಾಷಾ ಗಡಿ ಮೀರಿ ಸಾಹಿತ್ಯ ಅರಿತುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ನಗರಗೆರೆ ರಮೇಶ್ ಮಾತನಾಡಿ, ಭಾರತಕ್ಕೆ ಮೊಟ್ಟ ಮೊದಲ ನೊಬೆಲ್ ತಂದುಕೊಟ್ಟ ಕೀರ್ತಿ ರವೀಂದ್ರ ನಾಥ್ ಟ್ಯಾಗೋರ್ ಅವರಿಗೆ ಸಲ್ಲುತ್ತದೆ. ಅಂತಹ ಮಹಾನ್ ಕವಿಯ ಕೃತಿಯನ್ನು ‘ವನಮಾಲಿ: ಹೆಸರಿನಲ್ಲಿ ಕನ್ನಡಕ್ಕೆ ತಂದಿರುವ ಬಾಗೇಪಲ್ಲಿ ಕೃಷ್ಣಮೂರ್ತಿ ಅವರ ಕೆಲಸ ನಿಜಕ್ಕೂ ಶ್ಲಾಘನೀಯ ಎಂದರು.

ಕೃತಿಕಾರ ಬಾಗೆಪಲ್ಲಿ ಕೃಷ್ಣಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಕುಳ್ಳಾ ನಾಗರಾಜ್, ಸದಸ್ಯ ಸೋಮಣ್ಣ, ಮನವ ಹಕ್ಕುಗಳ ಹೋರಾಟಗಾರ ವರದಾಪುರ ನಾಗರಾಜ್, ವಕೀಲ್ ನಾಗರಾಜ್, ಪತ್ರಕರ್ತರ ಸಂಘದ ಅಧ್ಯಕ್ಷ ಶಿವನಾಪುರ ಡಿ.ನಾಗರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT