ವಿಜಯಪುರ(ದೇವನಹಳ್ಳಿ): ಪಟ್ಟಣದ ಶಿವಗಣೇಶ ಸರ್ಕಲ್‌ನಲ್ಲಿ ವ್ಯಾಪಾರದಲ್ಲಿ ತೊಡಗಿದ್ದ ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ ಪಾನಮತ್ತ ಯುವಕನನ್ನು ಸ್ಥಳೀಯರು ಥಳಿಸಿದ್ದಾರೆ.
ಇಲ್ಲಿನ ಅಂಗಡಿಯೊಂದರಲ್ಲಿ ಖರೀದಿಗೆ ಬಂದಿದ್ದ ಯುವಕ ಅಂಗಡಿಯಲ್ಲಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ. ಇದರಿಂದ ಕೆರಳಿದ ಮಹಿಳೆ, ಸಮೀಪದಲ್ಲಿದ್ದವರಿಗೆ ವಿಚಾರ ತಿಳಿಸಿದರು. ಆಗ ಸ್ಥಳೀಯರು ಹೊಡೆದು ಎಚ್ಚರಿಕೆ ನೀಡಿ ಕಳುಹಿಸಿದರು.
ಯುವಕ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ತಪ್ಪು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ, ಅವರ ವಶಕ್ಕೆ ನೀಡಬೇಕಾಗಿತ್ತು. ಹೀಗೆ ಸಾರ್ವಜನಿಕವಾಗಿ ಯುವಕನನ್ನು ಥಳಿಸಿರುವುದು ಖಂಡನೀಯ. ಈ ರೀತಿಯಾಗಿ ಮೂಲಕ ಅನೈತಿಕ ಪೊಲೀಸ್ ಗಿರಿ ಮಾಡಬಾರದು ಎಂದು ಪ್ರಜ್ಞಾವಂತರು ಆಕ್ಷೇಪಿಸಿದ್ದಾರೆ.
ಪಟ್ಟಣದ ಕೆಲ ವಾರ್ಡ್‌ಗಳಲ್ಲಿ ಪುಂಡರ ಹಾವಳಿ ಜಾಸ್ತಿಯಾಗಿದೆ. ರಾತ್ರಿ 12 ಗಂಟೆಯಾದರೂ ರಸ್ತೆಗಳಲ್ಲೆ ಗುಂಪು ಕೂಡಿಕೊಂಡು ಇರುತ್ತಾರೆ. ಪಾನಮತ್ತರಾಗಿರುತ್ತಾರೆ. ಪುರುಷರೂ ಕೂಡಾ ಮನೆಗಳಿಂದ ಹೊರಗೆ ಬರಲು ಭಯಪಡುವಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಇನ್ನು ಮಹಿಳೆಯರು ನಿರ್ಭಿತಿಯಿಂದ ಹೊರಗೆ ಓಡಾಡಲು ಸಾಧ್ಯವೇ?, ಕೆಲವರು ಅಂಗಡಿಗಳ ಬಳಿ ಕುಳಿತು ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಾರೆ ಎಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.