ದೊಡ್ಡಬಳ್ಳಾಪುರ:ಡಬ್ಲ್ಯುಡಬ್ಲ್ಯುಎಫ್ ಇಂಡಿಯಾ ಸಂಸ್ಥೆಯಿಂದ ‘ನಮಾಮಿ ಗಂಗೆ’ ಉತ್ಸವದ ಅಂಗವಾಗಿ ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೀರಿನ ಸದ್ಬಳಕೆ ಹಾಗೂ ಕೆರೆಗಳ ಮಹತ್ವ ಕುರಿತು ಅರಿವು ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ನೀರಿನ ಮೂಲಗಳ ಮಹತ್ವ, ನೀರಿನ ನೇರ ಬಳಕೆ, ಪರೋಕ್ಷ ಬಳಕೆಗಳಲ್ಲಿ ಮಾಡಬಹುದಾದಂತಹ ಉಳಿತಾಯದ ಬಗ್ಗೆ ಅರಿವು ಮೂಡಿಸಲಾಯಿತು.

ಕೊನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೋಹಿಸೀನಾ ತಾಜ್ ಮಾತನಾಡಿ, ನೀರನ್ನು ಮಿತವಾಗಿ ಬಳಸದಿದ್ದರೆ ಪೆಟ್ರೋಲ್, ಡೀಸೆಲ್ ಬೆಲೆಗಿಂತ ನೀರಿನ ಬೆಲೆ ಹೆಚ್ಚಾಗುವ ದಿನಗಳು ಮುಂದೆ ಬರಲಿವೆ
ಎಂದರು.

ಮುಖ್ಯಶಿಕ್ಷಕ ಜಿ.ಎಂ. ನಾಗರಾಜು ಮಾತನಾಡಿ, ಗ್ರಾಮದ ಶಿವಪುರ ಕೆರೆಯೂ ಅರ್ಕಾವತಿ ನದಿಯ ಭಾಗವಾಗಿದೆ. ವಿದ್ಯಾರ್ಥಿಗಳು ಕೆರೆ, ನದಿ ಹಾಗೂ ನೀರಿನ ಬಗ್ಗೆ ಈಗಿನಿಂದಲೇ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಡಬ್ಲ್ಯುಡಬ್ಲ್ಯುಎಫ್ ಇಂಡಿಯಾದ ಹಿರಿಯ ಯೋಜನಾಧಿಕಾರಿ ವೈ.ಟಿ. ಲೋಹಿತ್ ಮಾತನಾಡಿ, ನೇರವಾಗಿ ಬಳಸುವ ನೀರನ್ನಷ್ಟೇ ಮಿತವಾಗಿ ಬಳಸಿದರೆ ಸಾಲದು. ನಾವು ಬಳಸುವ ಪ್ರತಿಯೊಂದು ವಸ್ತುಗಳು ಹಾಗೂ ಆಹಾರದಲ್ಲೂ ನೀರಿನ ಬಳಕೆಯಾಗಿರುತ್ತದೆ. ಹಾಗಾಗಿ ವಸ್ತುಗಳನ್ನು ಮರುಬಳಕೆ ಮಾಡಿಕೊಂಡು ಆಹಾರವನ್ನು ಚೆಲ್ಲದಿರುವುದೂ ನೀರಿನ ಉಳಿತಾಯವೇ ಆಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಡಬ್ಲ್ಯುಡಬ್ಲ್ಯುಎಫ್ ಇಂಡಿಯಾ ಸಂಸ್ಥೆಯ ಶಶಿಕಲಾ ಐಯ್ಯರ್, ಶಿಕ್ಷಕರಾದ ಹರೀಶ್, ಗ್ರಾಮಸ್ಥರಾದ ಬಾಬ್ಜಾನ್, ಮುನಿಶಾಮಪ್ಪ, ನವೋದಯ ಚಾರಿಟಬಲ್ ಟ್ರಸ್ಟ್‌ನ ಆರ್. ಜನಾರ್ದನ್ ಹಾಗೂ ಶಾಲೆಯ ಮಕ್ಕಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.