ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವಿಶ್ವ ಆನೆ ದಿನಾಚರಣೆ ಭಾನುವಾರ ಆಚರಿಸಲಾಯಿತು. ಪ್ರವಾಸಿಗರಲ್ಲಿ ಆನೆಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಆನೆ ದಿನಾಚರಣೆ (ಆಗಸ್ಟ್ 12) ಪ್ರಯುಕ್ತ ಆನೆಗಳಿಗೆ ಗೆಣಸು, ಬಾಳೆಹಣ್ಣು, ಕಲ್ಲಂಗಡಿ, ಕಬ್ಬು ಮತ್ತು ಕಡಲೆ ನೀಡಲಾಯಿತು. ವಿಶ್ವ ಆನೆ ದಿನಾಚರಣೆ ಅಂಗವಾಗಿ ಆನೆಗಳು ಸಂಭ್ರಮಿಸಲು ವಿವಿಧ ಚಟುವಟಿಕ ಉದ್ಯಾನದಲ್ಲಿ ರೂಪಿಸಲಾಗಿತ್ತು.
ಆನೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆನೆಗಳ ನಿರ್ವಹಣೆ, ಕಾಡಿನಲ್ಲಿ ಎದುರಿಸುವ ಸಮಸ್ಯೆ, ಆನೆ ಚಲನ ವಲನ ಬಗ್ಗೆ ಮಾಹಿತಿ ನೀಡಲಾಯಿತು. ಉದ್ಯಾನದ ಸ್ವಯಂಸೇವಕರು ಪ್ರವಾಸಿಗರಿಗೆ ಆನೆಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರವಾಸಿಗರು ಆನೆ ಗುರುತಿನ ಚಿಹ್ನೆ ಮುದ್ರೆ ಹಾಕಲಾಯಿತು. ಪುಟಾಣಿ ಮಕ್ಕಳ ಕೆನ್ನೆ ಮೇಲೆ ಆನೆ ಬಣ್ಣ ಹಾಕಲಾಗಿತ್ತು. ಪುಟಾಣಿ ಮಕ್ಕಳು ಸಂಭ್ರಮದಿಂದ ಬಣ್ಣ ಹಾಕಿಸುವಿಕೆಯಲ್ಲಿ ಭಾಗಿಯಾಗಿದ್ದರು.
ಆನೆ ಕುಟುಂಬ:
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 12ಗಂಡು ಮತ್ತು 15 ಹೆಣ್ಣು ಸೇರಿದಂತೆ 27ಆನೆಗಳಿವೆ. 85 ವರ್ಷದ ಗಾಯತ್ರಿ ಆನೆ ಕುಟುಂಬದ ಹಿರಿಯ ಆನೆ ಆಗಿದೆ. ಸಫಾರಿ ಪ್ರಮುಖ ಆಕರ್ಷಣೆ. ಆನೆಗಳು ಸಾಮಾನ್ಯವಾಗಿ 6-7 ಮರಿಗಳಿಗೆ ಜನ್ಮ ನೀಡುತ್ತವೆ. ಆದರೆ, ಬನ್ನೇರುಘಟ್ಟ ಜೈವಿಕ ಉದ್ಯಾನದ ಸುವರ್ಣ ಒಂಒತ್ತು ಮರಿಗಳಿಗೆ ಜನ್ಮ ನೀಡಿದ್ದು ವಿಶೇಷ. ಮೂರ್ನಾಲ್ಕು ಆನೆಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ಆನೆಗಳು ಸುವರ್ಣಳ ಮಕ್ಕಳು, ಮೊಮ್ಮಕ್ಕಳಾಗಿರುವುದು ವಿಶೇಷ. ಇತ್ತೀಚಿಗೆ ಕಾಡಾನೆ ಮಕ್ನಾನನ್ನು ಸೆರೆ ಹಿಡಿದು ಉದ್ಯಾನದ ಸೀಗೆಕಟ್ಟಯಲ್ಲಿ ಇಡಲಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನದ ಸೀಗೇಕಟ್ಟೆಯಲ್ಲಿ ವಿಶ್ವ ಆನೆ ದಿನಾಚರಣೆ ಅಂಗವಾಗಿ ವಿಶೇಷ ಆಹಾರ ನೀಡಲಾಯಿತು
ಆನೆಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡಲಾಯಿತು
ಪುಟಾಣಿ ಮಕ್ಕಳಿಗೆ ಆನೆ ಚಿಹ್ನೆ ಹಾಕಲಾಯಿತು
ವಿಶ್ರಾಂತಿಯಲ್ಲಿ ಇರುವ ಆನೆ ಕುಟುಂಬ