ದೇವನಹಳ್ಳಿ: ಪ್ರಕೃತಿ ನಿಯಮದಂತೆ ಹುಟ್ಟು ಮತ್ತು ಸಾವು ನಿಶ್ಚಿತವಾದದ್ದು. ಆದರೆ ಪ್ರತಿಯೊಬ್ಬರೂ ತಮ್ಮ ಬದುಕಿಗೆ ಉದ್ದೇಶ ಇಟ್ಟುಕೊಳ್ಳಬೇಕು ಎಂದು ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಡಾ.ಸುಭಾಷ್ ಭರಣಿ ಹೇಳಿದರು.

ಪಟ್ಟಣದ ಲಯನ್ಸ್ ಸೇವಾಭವನದಲ್ಲಿ ಲಯನ್ಸ್, ಲಯನೆಸ್ ಸಂಸ್ಥೆ, ಬೆಂಗಳೂರು ಪಶ್ಚಿಮ ಲಯನ್ಸ್ ಕಣ್ಣಿನ ಆಸ್ಪತ್ರೆಯ ಅಕ್ಷಿ ಜೋಡಣಾ ಕೇಂದ್ರ ಮತ್ತು ಶ್ರಿಕೃಷ್ಣ ದೇವರಾಯ ದಂತ ವೈದ್ಯಕೀಯ ಮಹಾವಿದ್ಯಾಲಯದ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಉಚಿತ ಕಣ್ಣಿನ ಪರೀಕ್ಷೆ ಹಾಗೂ ದಂತಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪಶ್ಚಿಮದ ರಾಷ್ಟ್ರಗಳಲ್ಲಿ 14 ರಿಂದ 15 ವರ್ಷದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಲೆ ದುಡಿಮೆಯಲ್ಲಿ ತೊಡಗಿಸಿಕೊಂಡು ಉದ್ಯೋಗಕ್ಕೆ ಮುಂದಾಗುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಮದುವೆಯಾದರೂ ಕುಟುಂಬದ ನಿರ್ವಹಣೆಗೆ ಪೋಷಕರನ್ನು ಆಶ್ರಯಿಸಬೇಕಾಗಿದೆ ಎಂದರು.

ವೃದ್ಧರನ್ನು ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳುತ್ತಿದ್ದೇವೆ. ಇದರಿಂದ ಗ್ರಾಮೀಣ ಪ್ರದೇಶ ಸೇರಿದಂತೆ ನಗರಗಳಲ್ಲೂ ವೃದ್ಧರ ಬದುಕು ಶೋಚನೀಯವಾಗಿದೆ. ಇಲ್ಲಿನ ಲಯನ್ಸ್ ಸಂಸ್ಥೆ 35 ವರ್ಷದಿಂದ ಅಶಕ್ತರಿಗೆ ನೆರವು ನೀಡುತ್ತಿದೆ ಎಂದರು.

ಶಿಬಿರದ ಪ್ರಾಯೋಜಕ ಹಾಗೂ ಭಾರತ ಜನಜಾಗೃತಿ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ಮಾನವೀಯ ಮೌಲ್ಯಗಳು ಹಣದೊಂದಿಗೆ ಹೋಲಿಕೆಯಾಗುತ್ತಿವೆ. ಹಣದ ಮೋಹ ತಂದೆ, ತಾಯಿ, ಸಹೋದರ, ಗೆಳೆತನವನ್ನು ಹೊರಗಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಸ್ಪತ್ರೆಗಳು ಬಡ ರೋಗಿಗಳನ್ನು ಸುಲಿಗೆ ಮಾಡುತ್ತಿವೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಸುಮಾ ಮಾತನಾಡಿದರು. ಲಯನ್ಸ್ ಸಂಸ್ಥೆ ಅಧ್ಯಕ್ಷ ಪಿ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದರು, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಆರ್.ರವಿಕುಮಾರ್, ಕಾರ್ಯದರ್ಶಿ ಎನ್.ರವಿಕಮಾರ್, ಲಯನ್ಸ್ ಉಪಾಧ್ಯಕ್ಷ ಕೆ.ಶ್ರಿನಿವಾಸ್, ವಲಯ ಉಪಾಧ್ಯಕ್ಷ ಸತೀಶ್ ಕುಮಾರ್, ಮಾಜಿ ಅಧ್ಯಕ್ಷ ಸಿ.ಭಾಸ್ಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.