ವಿಜಯಪುರ: ಭಾಷೆ, ಜಾತಿ, ಧರ್ಮಗಳ ಬಗ್ಗೆ ಇರುವ ಸಂಕುಚಿತ ಭಾವನೆಯಿಂದ ಸಮಾಜ ಮತ್ತು ದೇಶದಲ್ಲಿ ಒಡಕು ಸಂಭವಿಸುವ ಅಪಾಯಗಳಿವೆ ಎಂದು ಸ್ವಾತಂತ್ರ್ಯ ಹೋರಾಟಗಾರ ಡಾ.ಎಸ್.ಎನ್.ಸುಬ್ಬರಾವ್ ಆತಂಕ ವ್ಯಕ್ತಪಡಿಸಿದರು. ಇಲ್ಲಿನ ಯುವಜನ ಸೇವಾಸಂಘ ಮತ್ತು ಸ್ಪಂದನ ಯುವಜನ ಸೇವಾಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೌಲ್ಯಗಳು, ಪ್ರಾಮಾಣಿಕತೆ ಕ್ಷೀಣಿಸುತ್ತಿದ್ದು, ಸಮಾಜದಲ್ಲಿ ಅಸಮತೋಲನ ಸೃಷ್ಟಿಯಾಗುತ್ತಿದೆ.

ಭಾವೈಕ್ಯ ಶಿಬಿರಗಳ ಮೂಲಕ ದೃಷ್ಟಿಕೋನದ ಬದಲಾವಣೆ ಸಾಧ್ಯ. ಎಲ್ಲರೂ ಒಂದೇ ಎನ್ನುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷ ಬೀಡಿಗಾನಹಳ್ಳಿ ಶಿವಣ್ಣ ಸುಬ್ಬರಾವ್ ಅವರನ್ನು ಸನ್ಮಾನಿಸಿದರು. ಗ್ಯಾಲಂಟಿ ಪ್ರಶಸ್ತಿ ಪುರಸ್ಕೃತ ಈಶ್ವರ್ ಜೋಯಿಸ್, ಪುರಸಭಾ ಸದಸ್ಯ ಟಿಲ್ಲರ್ ಎಂ.ಮಂಜುನಾಥ್, ಎನ್ವೈಪಿ ಸ್ವಯಂಸೇವಕರು, ಬಮುಲ್ ಮಾಜಿ ನಿರ್ದೇಶಕ ಎನ್.ನಾರಾಯಣಸ್ವಾಮಿ, ಎಂ.ಕೇಶವಪ್ಪ, ಎನ್.ಪುಟ್ಟರಾಜು, ಬಿ.ಪುಟ್ಟರಾಜಣ್ಣ, ವಿ.ಪ್ರಶಾಂತ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.