ದೊಡ್ಡಬಳ್ಳಾಪುರ: ‘ಶಿಕ್ಷಣ ಮತ್ತು ಸಮಾನತೆಗೆ ಒತ್ತು ನೀಡಿದಾಗ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿ ದಂತಾಗುತ್ತದೆ’ ಎಂದು ಮಾಜಿ ಶಾಸಕ ಮಾಜಿ ಶಾಸಕ ಆರ್.ಜಿ.ವೆಂಕಟಾ ಚಲಯ್ಯ ಹೇಳಿದರು.

ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ರುವ ಅಂಬೇಡ್ಕರ್ ಪ್ರತಿಮೆಗೆ ವಿವಿಧ ರಾಜಕೀಯ ಪಕ್ಷದ ಮುಖಂಡರು, ದಲಿತ ಸಂಘಟನೆಗಳ ಮುಖಂಡರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾ ರ್ಪಣೆ ಮಾಡಿ, ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸಿದರು.

ಅಂಬೇಡ್ಕರ್ ಅವರು ಜತ್ಯಾತೀತ ಮನೋಭಾವಕ್ಕೆ ಪ್ರೇರಣೆ ನೀಡಿದ ಅವರು ಮಹಾನ್ ವ್ಯಕ್ತಿ ಎಂದರು.

ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ರಾಜ್ಯ ಘಟಕದ ಅಧ್ಯಕ್ಷ ಬಿ.ಆರ್. ಭಾಸ್ಕರ್ ಪ್ರಸಾದ್, ರಾಜ್ಯ ಸಂಚಾಲಕ ಓ.ಎಂ.ನಾರಾಯಣಸ್ವಾಮಿ, ‘ಡಾ. ಬಿ.ಆರ್. ಅಂಬೇಡ್ಕರ್ ಅವರ ೫೭ ನೇ ಪರಿ ನಿರ್ವಾಣ ದಿನಾಚರಣೆ ಬಗ್ಗೆ ಯಾವುದೇ ವ್ಯವಸ್ಥೆ ಮಾಡದೇ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿ ಸುತ್ತಿದೆ ಎಂದು ದೂರಿದರು. ದಲಿತರ ಹಕ್ಕು, ಮೂಲಭೂತ ಸೌಕರ್ಯಗಳು ಜನಾಂಗದ ಕಡೆಯ ವ್ಯಕ್ತಿಗಳಿಗೂ ತಲುಪಿ ಸುವಲ್ಲಿ ಆಡಳಿತ ಯಂತ್ರ ವಿಫಲ ವಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ಸಂಘದ ತಾಲ್ಲೂಕು ಅಧ್ಯಕ್ಷ ಚೆಲುವಹನು ಮಯ್ಯ, ಪ್ರಧಾನ ಕಾರ್ಯದರ್ಶಿ ಎಸ್.ಬಿ.ರಾಮಚಂದ್ರಪ್ಪ, ತಾಲ್ಲೂಕು ಸಂಚಾಲಕ ಟಿ.ವೀರಸ್ವಾಮಿ, ನಗರ ಅಧ್ಯಕ್ಷ ನಾಗರಾಜು ಹಾಜರಿದ್ದರು.

ಛಲವಾದಿ ಮಹಾಸಭಾ: ತಾಲ್ಲೂಕು ಛಲವಾದಿ ಮಹಾಸಭಾದಿಂದ ಅಂಬೇ ಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡ ಲಾಯಿತು. ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಲಕ್ಷ್ಮೀಪತಿ, ಕಾರ್ಯದರ್ಶಿ ಬಾಲ ಕೃಷ್ಣ, ಗೌ.ಅಧ್ಯಕ್ಷ ಪ್ರೊ.ಚಂದ್ರಪ್ಪ, ತಾ.ನೌಕರರ ಸಂಘದ ಅಧ್ಯಕ್ಷ ಪೊನ್ನೂರು ಮತ್ತಿತರರು ಹಾಜರಿದ್ದರು.

‘ಅಂಬೇಡ್ಕರ್ ಶೋಷಿತರ ದನಿ’
ದೇವನಹಳ್ಳಿ: ‘ಬಾಲ್ಯದಿಂದಲೇ ಅತ್ಯಂತ ಕಠಿಣ ಪರಿಸ್ಥಿತಿಯಿಂದ ಶಿಕ್ಷಣ ಪಡೆದು ಶೋಷಿತರ ದನಿಯಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮಹಾನ್ ವ್ಯಕ್ತಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮುನಿರಾಜು ಅಭಿಪ್ರಾಯ ಪಟ್ಟರು.

ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಎಲ್ಲಾ ದಲಿತ ಪರ ಸಂಘ ಟನೆಗಳ ಸಂಯುಕ್ತಾಶಯದಲ್ಲಿ ಏರ್ಪಡಿ ಸಿದ್ದ ಡಾ.ಬಿ.ಆರ್ ಅಂಬೇಡ್ಕರ್ 57 ನೇ ಮಹಾಪರಿ ನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಶೋಷಿತರಿಗೆ ನ್ಯಾಯ ಒದಗಿಸಲು ಶ್ರಮಿಸಿದ ಅಂಬೇಡ್ಕರ್ ಅವರು ನಿಷ್ಠೆ ಯಲ್ಲಿ ಯಾರೊಂದಿಗೂ ರಾಜಿ ಮಾಡಿ ಕೊಳ್ಳದವರು’ ಎಂದು ಹೇಳಿದರು.

ತಹಶೀಲ್ದಾರ್.ಡಾ.ಎನ್.ಸಿ ವೆಂಕಟರಾಜು ಮಾತನಾಡಿ, ‘ಡಾ.ಬಿ. ಆರ್ ಅಂಬೇಡ್ಕರ್ ಅವರು ಶೋಷಿತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಯನ್ನರಿತು ಸಂವಿಧಾನ ಕರಡು ರೂಪಿ ಸಿದರು. ಶೋಷಿತ ಸಮುದಾಯದಲ್ಲೇ ಒಳ ಪಂಗಡಗಳೆಂಬ ಭೇದ ಭಾವ ಹೆಚ್ಚು ತ್ತಿದೆ. ಈ ದೇಶದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಹುಟ್ಟಿರದಿದ್ದರೆ ಶೋಷಿತರ ಬದುಕು ಊಹೆ ಮಾಡಿಕೊಳ್ಳಲು ಸಾಧ್ಯ ವಿರುತ್ತಿರಲಿಲ್ಲ’ ಎಂದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಮಾತ ನಾಡಿ, ‘ಡಾ.ಅಂಬೇಡ್ಕರ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಶೋಷಿತರಿಗಾಗಿಯೇ ತಮ್ಮ ಬದುಕಿನುದ್ದಕ್ಕೂ ಹೋರಾಟ ನಡೆಸಿ ದವರು. ಶಿಕ್ಷಣದಲ್ಲಿ ಅವರು ಪಡೆದ ಮಹೋನ್ನತ ಪದವಿಗಳು ಅಪಾರ ಜ್ಞಾನಾರ್ಜನೆಗೆ ಹಿಡಿದ ಕನ್ನಡಿ. ದಲಿತ ಸಂಘಟನೆಗಳು ಕಳೆದ ಆರೇಳು ವರ್ಷ ದಿಂದ ನಡೆಸಿದ ಹೋರಾಟಕ್ಕೆ ಸರ್ಕಾರ ಕೊನೆಗೂ ಪರಿ ಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನಲ್ಲಿ ಹಣ ನೀಡಿ, ಅದನ್ನು ಏಕ ಗವಾಕ್ಷಿ ಮೂಲಕ ವೆಚ್ಚ ಮಾಡುವ ಮತ್ತು ಹಣ ವೆಚ್ಚ ಮಾಡದ ಅಧಿ ಕಾರಿಗಳಿಗೆ ಶಿಕ್ಷೆ ನೀಡುವ ಮಹತ್ವದ ಮಸೂದೆಗೆ ಅಂಗೀ ಕಾರ ನೀಡಿರುವುದು ಸ್ವಾಗತಾರ್ಹ’ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಎಂ.ನಾರಾ ಯಣಸ್ವಾಮಿ, ಮುಖಂಡ ಗುರಪ್ಪ, ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ, ತಾಲ್ಲೂಕು ಅಧ್ಯಕ್ಷ ಜಿ.ಮಾರಪ್ಪ, ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಚಿನ್ನ, ಪುರಸಭೆ ಸದಸ್ಯ ಎಂ.ಮೂರ್ತಿ, ಮಾಜಿ ಸದಸ್ಯ ಕುಮಾರ್, ತಾ.ಪಂ ಮಾಜಿ ಅಧ್ಯಕ್ಷ ಎಸ್.ಜಿ.ನಾರಾಯಣಸ್ವಾಮಿ, ಕೆ.ಜೆ.ಪಿ ಪರಿಶಿಷ್ಟ ಘಟಕ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶ್ರೀನಿವಾಸ್, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ ಲೋಹರ, ವೃತ್ತ ನಿರೀಕ್ಷಕ ಮಂಜುನಾಥ್, ಎ.ಎಸ್. ಐ ನಂದೀಶ್, ಪಿ.ವಿ.ಸಿ ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ್ ವಿಜಯಪುರ ಹೋಬಳಿ ಮಾದಿಗ ದಂಡೋರ ಅಧ್ಯಕ್ಷ ಮಾರಪ್ಪ ಇದ್ದರು. ದಕ್ಷಿಣಾ ಆಫ್ರಿಕಾ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೆಲಾ ಅವರಿಗೆ ಸಂತಾಪ ಕಾರ್ಯಕ್ರಮಕ್ಕೆ ಮುನ್ನ ಸೂಚಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.