ಬೆಳಗಾವಿ: ಮಾನವ ಬಂಧುತ್ವ ವೇದಿಕೆ–ಕರ್ನಾಟಕ ವತಿಯಿಂದ ‘ಸಾವಿತ್ರಿ ಬಾಯಿ ಫುಲೆ ಅವರ ಹೋರಾಟ ಮತ್ತು ಮಹಿಳಾ ಶಿಕ್ಷಣಕ್ಕೆ ಅವರ ಕೊಡುಗೆ’ ವಿಷಯ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.

ಕನ್ನಡ, ಹಿಂದಿ, ಮರಾಠಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧವನ್ನು ಟೈಪ್ ಮಾಡಿ ಜ.5ರ ಒಳಗೆ ತಲುಪುವಂತೆ – ಮಾನವ ಬಂಧುತ್ವ ವೇದಿಕೆ ಕರ್ನಾಟಕ ಕೇಂದ್ರ ಕಚೇರಿ, ಶಿವಕೃಪಾ ಬಿಲ್ಡಿಂಗ್, ಕೊಲ್ಹಾಪುರ ವೃತ್ತದ ಸಮೀಪ, ನೆಹರೂ ನಗರ, ಬೆಳಗಾವಿ– 591010– ಈ ವಿಳಾಸಕ್ಕೆ ಕಳುಹಿಸಬೇಕು. 25 ವರ್ಷದೊಳಗಿನವರು ಮಾತ್ರ ಪಾಲ್ಗೊಳ್ಳಬಹುದು.

ಜ.10ರಂದು ಗೋಕಾಕದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುವ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆಯ್ಕಯಾದ 10 ಮಂದಿಗೆ ವೇದಿಕೆಯ ಸಂಸ್ಥಾಪಕ ಮತ್ತು ಶಾಸಕ ಸತೀಶ ಜಾರಕಿಹೊಳಿ ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ವಿಹಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.