ಗುರುವಾರ , ಜುಲೈ 29, 2021
20 °C

ಒಂದು ತಾಸಲ್ಲಿ 190 ಸಕ್ಕರೆ ಚೀಲ ಕಳವು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ತಾಲ್ಲೂಕಿನ ಶಿವಾಪೂರ ಮತ್ತು ಸುತಗಟ್ಟಿ ಗ್ರಾಮದ ಮಧ್ಯದ ರಸ್ತೆಯಲ್ಲಿ ಮಂಗಳವಾರ ಅಪಘಾತಕ್ಕೀಡಾದ ಸರಕು ಸಾಗಣೆ ವಾಹನದಿಂದ ಕೇವಲ ಒಂದು ತಾಸಿನಲ್ಲಿ 190 ಸಕ್ಕರೆ ಚೀಲಗಳನ್ನು (50 ಕೆ.ಜಿ.ಯವು) ಕಳವು ಮಾಡಲಾಗಿದೆ.

ನೆರೆಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಯಿಂದ 300 ಸಕ್ಕರೆ ಚೀಲಗಳನ್ನು ಸಾಗಿಸಲಾಗುತ್ತಿತ್ತು. ವಾಹನ ಪಲ್ಟಿಯಾದ್ದರಿಂದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದ. ಅವರನ್ನು ಇನ್ನೊಬ್ಬ ಚಾಲಕ ಮತ್ತು ಕ್ಲೀನರ್‌ ಆಸ್ಪತ್ರೆಗೆ ದಾಖಲಿಸಿ ಬರುವ ವೇಳೆಗಾಗಲೇ ಕಳವು ನಡೆದಿದೆ ಎಂದು ದೂರು ನೀಡಲಾಗಿದೆ. ಸಮೀಪದ ಗ್ರಾಮದವರು ಹಾಗೂ ದಾರಿಯಲ್ಲಿ ಹೋಗುತ್ತಿದ್ದವರು ಸಕ್ಕರೆ ಚೀಲಗಳನ್ನು ಕಳವು ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಕಾಕತಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಶ್ರೀಶೈಲ ಕೌಜಲಗಿ, ಪಿಎಸ್ಐ ಅವಿನಾಶ ಯರಗೊಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು