ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ: ₨3.80 ಲಕ್ಷ ಉಳಿತಾಯ ಬಜೆಟ್‌

Last Updated 5 ಮಾರ್ಚ್ 2014, 9:59 IST
ಅಕ್ಷರ ಗಾತ್ರ

ಚಿಕ್ಕೋಡಿ: ಪಟ್ಟಣದ ಪುರಸಭೆಯು 2014-–15ನೇ ಆರ್ಥಿಕ ವರ್ಷದಲ್ಲಿ ₨ 16.28 ಕೋಟಿ ಆದಾಯ ಹಾಗೂ ₨ 16.24 ಕೋಟಿಗಳಷ್ಟು ಖರ್ಚುಗಳನ್ನು ಅಂದಾಜಿಸಿದ್ದು, ₨ 3.80 ಲಕ್ಷ ಉಳಿ ತಾಯ ಆಯವ್ಯಯ ಮಂಡಿಸಿದೆ. 

ಸೋಮವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಪುರಸಭೆ ಅಧ್ಯಕ್ಷ ನರೇಂದ್ರ ನೇರ್ಲೆಕರ 2014–-15ನೇ ಸಾಲಿನ ಅಂದಾಜು ಆಯವ್ಯಯ ಮಂಡಿಸಿದರು.

ಸಭೆಗೆ ಬಜೆಟ್‌ನ ವಿವರಣೆ ನೀಡಿದ ಮುಖ್ಯಾಧಿಕಾರಿ ಮಹಾವೀರ    ಬೋರ ನ್ನವರ ಅವರು, ‘ಆಸ್ತಿ, ತೆರಿಗೆ, ನೀರಿನ ಕರ, ಕಟ್ಟಡ ಪರವಾನಿಗೆ ಶುಲ್ಕ, ಎನ್. ಓ.ಸಿ, ಖಾತಾ ಬದಲಾವಣೆ ಸೇರಿದಂತೆ ವಿವಿಧ ಮೂಲಗಳಿಂದ ₨ 1.93 ಕೋಟಿ ಮತ್ತು ಸರ್ಕಾರದಿಂದ ಬರುವ 13ನೇ ಹಣಕಾಸು ಅನುದಾನ, ವೇತನ ಅನು ದಾನ, ವಿದ್ಯುತ್ ಅನುದಾನ, ಮುಕ್ತ ನಿಧಿ, ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆ, ನಗರೋತ್ಥಾನ ಅನುದಾನ ಸೇರಿದಂತೆ ವಿವಿಧ ಯೋಜನೆ ಗಳಡಿ ಒಟ್ಟು ₨ 13.12 ಕೋಟಿ ಸೇರಿ ದಂತೆ ಪುರಸಭೆಯ ಒಟ್ಟು ಆದಾಯ ₨ 15.05 ಕೋಟಿ ಮತ್ತು ಅಸಾಮಾನ್ಯ ಆದಾಯ ₨ 1.23 ಕೋಟಿ ಸೇರಿ ಒಟ್ಟು ₨ 16,28,70,180 ಆದಾಯ ನಿರೀಕ್ಷಿಸಿದೆ’ ಎಂದರು.

‘2014-–15ನೇ ಸಾಲಿನಲ್ಲಿ ಸಿಬ್ಬಂದಿ ವೇತನ, ಘನತ್ಯಾಜ್ಯ ಮತ್ತು ಆರೋಗ್ಯ ವಿಭಾಗ, ನೀರು ಸರಬರಾಜು ವಿಭಾಗ, ಕಂಪ್ಯೂಟರ್ ಆಪರೇಟರ್ ಮೊದಲಾದ ಹೊರಗುತ್ತಿಗೆ ಕಾರ್ಯಾಚರಣೆ ವೆಚ್ಚ, ದಾರಿ ದೀಪ ವಿದ್ಯುತ್ಶಕ್ತಿ, ಆಡಳಿತ ತರಬೇತಿ ಮುಂತಾದವುಗಳಿಗೆ ಒಟ್ಟು ₨ 7.35 ಕೋಟಿ ಹಾಗೂ ಭೂಸ್ವಾಧೀನ ಪ್ರಕರಣ, ಸಾರ್ವಜನಿಕ ಶೌಚಾಲಯ ನಿರ್ಮಾಣ, ಕಲ್ಯಾಣ ಮಂಟಪ ಮತ್ತು ಸಮುದಾಯ ಭವನ, ಸ್ಮಶಾನಗಳ ಅಭಿವೃದ್ಧಿ, ಸಿ.ಸಿ.ರಸ್ತೆಗಳ ನಿರ್ಮಾಣ, ಉದ್ಯಾನವನ ನಿರ್ಮಾಣ ಮತ್ತು ಅಭಿವೃದ್ಧಿ ಮೊದಲಾದ ಕಾರ್ಯಗಳಿ ಗಾಗಿ ₨ 7.65 ಕೋಟಿ ಬಂಡವಾಳ ಪಾವತಿ ಸೇರಿ ಒಟ್ಟು ₨ 15.01 ಕೋಟಿ ಹಾಗೂ ರೂ.1.23 ಕೋಟಿ ಅಸಾ ಮಾನ್ಯ ಪಾವತಿ ಸೇರಿದಂತೆ ಒಟ್ಟು ₨ 16,24,90,180 ಖರ್ಚುಗಳನ್ನು ಅಂದಾಜಿಸಿದೆ’ ಎಂದು ಮಹಾವೀರ ಬೋರನ್ನವರ ತಿಳಿಸಿದರು.

ಆದಾಯ ಹೆಚ್ಚಿಸಿ: 'ಪುರಸಭೆಯು ಕೇವಲ ಸರ್ಕಾರದ ಅನುದಾನಗಳನ್ನೇ ನಿರೀಕ್ಷಿಸುವುದು ಸಮಂಜಸವಲ್ಲ. ಸ್ಥಳೀೀಯ ಆದಾಯ ಸಂಪನ್ಮೂಲ ಗಳನ್ನೂ ಹೆಚ್ಚಿಸುವತ್ತ ಗಮನ ಹರಿಸ ಬೇಕು’ ಎಂದು ಸಲಹೆ ನೀಡಿದ ಸದಸ್ಯ ಜಗದೀಶ ಕವಟಗಿಮಠ ಅವರು,  ’ಪ್ರಸ್ತುತ ಬಜೆಟ್‌ನಲ್ಲಿ ವಾಣಿಜ್ಯ ಮಳಿಗೆ ಗಳಿಂದ ಕೇವಲ ₨ 3 ಲಕ್ಷ ಲೈಸೆನ್ಸ್ ಫೀ ಸಂಗ್ರಹಿಸುವ ಗುರಿ ಹೊಂದಿದೆ. ಆದರೆ, ಕಳೆದ ಅವಧಿಯಲ್ಲಿ ₨ 6 ಲಕ್ಷಗಳಷ್ಟು ಲೈಸೆನ್ಸ್ ಫೀ ಕ್ರೂಢಿಕರಣ ಮಾಡಲಾ ಗಿತ್ತು. ಪಟ್ಟಣದಲ್ಲಿರುವ ಎಲ್ಲ ಅಂಗಡಿ ಗಳಿಂದ ಲೈಸೆನ್ಸ್ ಫೀ  ಸಂಗ್ರಹಣೆಗೆ ಕ್ರಮ ತಗೆದುಕೊಳ್ಳಿ’ ಎಂದು ಸೂಚನೆ ನೀಡಿ ದರು. ಸಲಹೆಗೆ ಸ್ಪಂದಿಸಿದ ಅಧ್ಯಕ್ಷ ನರೇಂದ್ರ ನೇರ್ಲೆಕರ ಅವರು, ಕ್ರಮಕ್ಕೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ಪುರಸಭೆ ಉಪಾಧ್ಯಕ್ಷ ಗುಲಾಬ್‌ ಹುಸೇನ ಬಾಗವಾನ್, ರವಿ ಪಾಟೀಲ, ಶಾಮ ರೇವಡೆ, ಪಿ.ಐ.ಕೋರೆ, ರಂಜೀತ ಸಾಂಗ್ರೋಳೆ, ಕಲ್ಮೇಶ ಕಿವಡ, ನಾಗೇಶ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT