ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ವಿದ್ಯುತ್‌ ಪರಿವರ್ತಕ ಏರಿದ ಮಾನಸಿಕ ಅಸ್ವಸ್ಥ

Published 24 ಮೇ 2024, 16:08 IST
Last Updated 24 ಮೇ 2024, 16:08 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಟಿಳಕ ಚೌಕ್‌ನಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಶುಕ್ರವಾರ ವಿದ್ಯುತ್‌ ಪರಿವರ್ತಕ ಒಳಗೊಂಡ ಕಂಬ ಏರಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಸಂಚಾರ ಸಮಸ್ಯೆ ತಲೆದೋರಿತು.

ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಹೆಸ್ಕಾಂ ಸಿಬ್ಬಂದಿ ಮತ್ತು ಪೊಲೀಸರು, ಆತನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾದರು.

‘ವಿದ್ಯುತ್‌ ಪರಿವರ್ತಕ ಒಳಗೊಂಡ ಕಂಬ ಏರಿದವನು ಮಾನಸಿಕ ಅಸ್ವಸ್ಥನಾಗಿದ್ದಾನೆ. ಏಕೆ ಹೀಗೆ ವರ್ತಿಸುತ್ತಿದ್ದೇನೆ ಎಂದು ಸ್ವತಃ ಅವನಿಗೆ ಗೊತ್ತಿಲ್ಲ. ವಿಚಾರಣೆ ನಡೆಸಿದರೂ, ತನ್ನ ಹೆಸರು ಮತ್ತು ಊರಿನ ವಿಳಾಸ ತಿಳಿಸಲಿಲ್ಲ. ಮುಂದೆ ಹೀಗೆ ವರ್ತಿಸದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದೇವೆ’ ಎಂದು ಖಡೇಬಜಾರ್‌ ಠಾಣೆಯ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT