ಖಾನಾಪುರ: ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಇರುವ ಹಲವಾರು ಸರ್ಕಾರಿ ಕಟ್ಟಡಗಳು ಬಳಕೆಯಿಲ್ಲದೇ ಪಾಳು ಬಿದ್ದಿವೆ. ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ತಾಲ್ಲೂಕು ಪಂಚಾಯಿತಿಗಳ ಒಡೆತನದಲ್ಲಿರುವ ಈ ಕಟ್ಟಡಗಳು ಅನಾಥವಾಗಿ ಬಿದ್ದಿವೆ.

ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ಸರ್ಕಾರಿ ಕಟ್ಟಡಗಳನ್ನು ಜನೋಪಯೋಗಿ ಆಗಿಸುವಲ್ಲಿ ಜನಪ್ರತಿನಿಧಿಗಳಲ್ಲಿರುವ ನಿರಾಸಕ್ತಿಯ ಪರಿಣಾಮ ಕೋಟ್ಯಂತರ ಬೆಲೆಬಾಳುವ ವಿವಿಧ ಸರ್ಕಾರಿ ಕಟ್ಟಡಗಳು ಇದ್ದೂ ಇಲ್ಲದಂತಾಗಿವೆ. ಬಹಳಷ್ಟು ಶಿಥಿಲಾವಸ್ಥೆ ಬಂದು ತಲುಪಿವೆ. ಕೆಲವು ಒತ್ತುವರಿಯಾಗಿ ವಾಣಿಜ್ಯ ಬಳಕೆಗೆ ಉಪಯೋಗಿಸಲ್ಪಟ್ಟಿವೆ.

ಹಿಂದೆ ಜನಸೇವೆಗೆ ಬಳಕೆಯಾದ ಕಟ್ಟಡಗಳು ಇಂದು ಯಾರಿಗೂ ಬೇಡವಾಗಿವೆ. ಅಕ್ರಮ ಚಟುವಟಿಕೆಗಳ ತಾಣವಾಗಿವೆ. ತಾಲ್ಲೂಕಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಬೇಡವೆನಿಸಿರುವ ಈ ಕಟ್ಟಡಗಳ ಸಂರಕ್ಷಣೆ, ದುರಸ್ತಿ ಮತ್ತು ಸದ್ಬಳಕೆಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಮುಂದಾಗಬೇಕು ಎಂದು ತಾಲ್ಲೂಕಿನ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ತಹಸೀಲ್ದಾರ್ ಕಚೇರಿ: ಖಾನಾಪುರ ಪಟ್ಟಣದ ಮಲಪ್ರಭಾ ನದಿ ತೀರದ ದೊಡ್ಡ ಕಟ್ಟಡದಲ್ಲಿ 2009ರವರೆಗೆ ತಹಶೀಲ್ದಾರ್, ಸಬ್ ರಿಜಿಸ್ಟರ್, ಉಪ ಖಜಾನೆ, ತಾಲ್ಲೂಕು ಕಾರಾಗೃಹ, ಭೂ ಮಾಪನ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. 2009ರಲ್ಲಿ ಆಗಿನ ತಹಶೀಲ್ದಾರರ ಸರ್ಕಾರಿ ನಿವಾಸವಾಗಿದ್ದ ಈಗಿನ ಮಿನಿವಿಧಾನಸೌಧಕ್ಕೆ ಈ ಎಲ್ಲ ಕಚೇರಿಗಳು ಸ್ಥಳಾಂತರಗೊಂಡವು. ಅಂದಿನಿಂದಲೂ ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳ ಹಳೆಯ ಕಚೇರಿಗಳು ಸಂಬಂಧಿಸಿದವರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಸಿಪಿಐ ಕಚೇರಿ: ಪೊಲೀಸ್ ಇಲಾಖೆ ಕೆಲ ವರ್ಷಗಳ ಹಿಂದೆ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಯನ್ನು ಮೊಟಕುಗೊಳಿಸಿ ಆಗಿನ ಖಾನಾಪುರ ಮತ್ತು ನಂದಗಡ ಠಾಣೆಗಳ ಮುಖ್ಯಸ್ಥರ ಹುದ್ದೆಯನ್ನು ಸಬ್ ಇನ್ಸ್ಪೆಕ್ಟರ್ನಿಂದ ಪೊಲೀಸ್ ಇನ್ಸ್ಪೆಕ್ಟರ್ ಸ್ಥಾನಕ್ಕೆ ಪದೋನ್ನತಿಗೊಳಿಸಿತ್ತು.

ಆಗಿನಿಂದ ಪಟ್ಟಣದ ಹೃದಯಭಾಗದಲ್ಲಿದ್ದ ಸರ್ಕಲ್ ಇನ್ಸಪೆಕ್ಟರ್ ಕಚೇರಿ ಪೊಲೀಸ್ ಇಲಾಖೆಯಿಂದ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳುಬಿದ್ದಿದೆ. ಪಟ್ಟಣದಲ್ಲಿ ಕಳೆದ ಹತ್ತಾರು ದಶಕಗಳಿಂದ ಅಸ್ತಿತ್ವದಲ್ಲಿದ್ದ ಸುಸಜ್ಜಿತ ಮತ್ತು ಗಟ್ಟಿಮುಟ್ಟಾದ ಕಚೇರಿ ಇಂದು ಬೀಗ ಜಡಿದ ಸ್ಥಿತಿಯಲ್ಲಿದೆ. ಬ್ರಿಟೀಷ್ ಕಾಲದ ಕಲ್ಲಿನ ಮತ್ತು ಮಂಗಳೂರು ಹೆಂಚಿನ ಕಟ್ಟಡ ಇಂದು ಬಳಕೆಯಲ್ಲಿಲ್ಲದ ಕಾರಣ ದಯನೀಯ ಸ್ಥಿತಿಗೆ ತಲುಪಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಕಟ್ಟಡ ನಿಸ್ತೇಜ ಸ್ಥಿತಿಯಲ್ಲಿರುವ ಕಾರಣ ಹುಳ-ಹುಪ್ಪಡಿಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ.

ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ ಮಾದರಿಯಲ್ಲಿ ನಂದಗಡ ಮತ್ತು ಖಾನಾಪುರ ಪೊಲೀಸ್ ಠಾಣೆಗಳ ಹಳೆಯ ಕಟ್ಟಡಗಳು ಇದ್ದೂ ಇಲ್ಲದಂತಹ ಸ್ಥಿತಿಗೆ ತಲುಪಿವೆ. ಹಳೆಯ ಕಟ್ಟಡದ ಬಳಿ ಇಲಾಖೆ ಇತ್ತೀಚೆಗೆ ಹೊಸ ಕಟ್ಟಡ ನಿರ್ಮಿಸಿದ ಬಳಿಕ ಎರಡೂ ಠಾಣೆಗಳು ಹೊಸ ಕಟ್ಟಡಗಳಿಗೆ ಸ್ಥಳಾಂತರಗೊಂಡಿದ್ದು, ಹಳೆಯ ಕಟ್ಟಡಗಳು ಪಾಳು ಬಿದ್ದಿವೆ. ಇದೇ ರೀತಿ ಕಕ್ಕೇರಿ ಗ್ರಾಮದಲ್ಲಿರುವ ಮತ್ತು ಪಟ್ಟಣದ ಪೊಲೀಸ್ ತರಬೇತಿ ಶಾಲೆಯ ಆವರಣದಲ್ಲಿರುವ ಅನೇಕ ಪೊಲೀಸ್ ವಸತಿಗೃಹಗಳೂ ಬಳಕೆಯಲ್ಲಿಲ್ಲ. ಕಕ್ಕೇರಿಯ ವಸತಿಗೃಹಗಳಂತೂ ಗಿಡಗಂಟಿಗಳಿಂದ ತುಂಬಿಕೊಂಡು ಅನಾಥ ಪ್ರಜ್ಞೆ ಎದುರಿಸುತ್ತಿವೆ.

ಪ್ರಭಾವಿಗಳ ಪಾಲಿಗೆ ಕಲ್ಪವೃಕ್ಷ: ಪಟ್ಟಣದ ಹೃದಯಭಾಗದಲ್ಲಿ ಆಗಿನ ತಾಲ್ಲೂಕು ಅಭಿವೃದ್ಧಿ ಮಂಡಳಿ (ಟಿ.ಡಿ.ಬಿ) (ಈಗಿನ ತಾಲ್ಲೂಕು ಪಂಚಾಯಿತಿ) ಒಡೆತನದಲ್ಲಿ ಐದಾರು ಎಕರೆ ಆಸ್ತಿ ಇದೆ. ಈ ಆಸ್ತಿಯ ನಿರ್ವಹಣೆಯನ್ನು ತಾಲ್ಲೂಕು ಪಂಚಾಯ್ತಿಯ ಅಧಿಕಾರಿಗಳು ಸರಿಯಾಗಿ ಕೈಗೊಳ್ಳದ ಕಾರಣ ಇಂದು ಕೋಟ್ಯಂತರ ಬೆಲೆಬಾಳುವ ಆಸ್ತಿ ಪ್ರಭಾವಿಗಳ ಪಾಲಿಗೆ ಕಲ್ಪವೃಕ್ಷವಾಗಿ ಪರಿಣಮಿಸಿದೆ. ಜನನಿಬಿಡ ಮತ್ತು ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿರುವ ಈ ಆಸ್ತಿಯನ್ನು ತಾಲ್ಲೂಕಿನ ‘ಪ್ರಭಾವಿ’ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ.

ತಾಲ್ಲೂಕು ಪಂಚಾಯಿತಿ ಒಡೆತತನದ 30ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿವೆ. 2,000ನೇ ಇಸ್ವಿಯಿಂದ ಈಚೆಗೆ ಈ ಮಳಿಗೆಗಳ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. 2000 ಮತ್ತು ಅದಕ್ಕೂ ಪೂರ್ವದಲ್ಲಿ ಈ ಮಳಿಗೆಗಳ ಟೆಂಡರ್ ಪಡೆದವರು ಈ ಮಳೆಗೆಗಳ ಮರು ಟೆಂಡರ್ ಮಾಡದಂತೆ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ತಂದು ಅಲ್ಲಿಂದ ಇಲ್ಲಿಯವರೆಗೆ ತಾಲ್ಲೂಕು ಪಂಚಾಯ್ತಿಗೆ ನೂರರ ಲೆಕ್ಕದಲ್ಲಿ ಬಾಡಿಗೆ ಪಾವತಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ಈ ಮಳೆಗೆಗಳನ್ನು ಬಾಡಿಗೆ ಪಡೆದವರು ಇತರರಿಗೆ ಸಾವಿರಾರು ರೂಪಾಯಿ ಲೆಕ್ಕದಲ್ಲಿ ಬಾಡಿಗೆ ನೀಡಿ ಅವರಿಂದ ಲಕ್ಷಾಂತರ ರೂಪಾಯಿ ಡೆಪಾಜಿಟ್ ಮತ್ತು ಬಾಡಿಗೆ ಪಡೆಯುತ್ತಿದ್ದಾರೆ. ಪರಿಣಾಮ ಈ ಮಳಿಗೆಗಳಿಂದ ತಾಲ್ಲೂಕು ಪಂಚಾಯ್ತಿಗೆ ಬರಬೇಕಿದ್ದ ನಿರೀಕ್ಷಿತ ಆದಾಯಕ್ಕೆ ಕೊಡಲಿಯೇಟು ಬಿದ್ದಿದೆ.

ವಸತಿಗೃಹಗಳು, ಶಾಲಾ ಕೊಠಡಿಗಳು: ಪಟ್ಟಣದ ವಿವಿಧೆಡೆ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಾಸಕ್ಕಾಗಿ ಹಲವು ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಅವುಗಳ ಪೈಕಿ ತಾಲ್ಲೂಕು ಪಂಚಾಯ್ತಿ, ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಸತಿ ಗೃಹಗಳು, ಪೊಲೀಸ್ ಠಾಣೆ ಎದುರಿನ ಪೊಲೀಸ್ ಅಧಿಕಾರಿಗಳ ವಸತಿ ಗೃಹಗಳು, ಇ.ಒ ಅವರ ವಸತಿಗೃಹಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಬಳಸುತ್ತಿಲ್ಲ. ಜೊತೆಗೆ ಅರಣ್ಯ ಇಲಾಖೆ ನಿರ್ಮಿಸಿದ ಶಿರೋಲಿ, ಚಿಕಲೆ, ಜಾಂಬೋಟಿ, ಗುಂಜಿ, ಬೇಟಣೆ, ನಾಗರಗಾಳಿ ಮತ್ತಿತರ ಕಡೆಗಳಲ್ಲಿರುವ ವಸತಿಗೃಹಗಳು ಪಾಳುಬಿದ್ದಿವೆ.

ಇವರೇನಂತಾರೆ?

ಹಳೆ ತಹಶೀಲ್ದಾರ್ ಕಚೇರಿಯ ಜಾಗವನ್ನು 70 ವರ್ಷಗಳ ಹಿಂದೆ 99 ವರ್ಷಗಳ ಅವಧಿಗೆ ಲೀಸ್ ಪಡೆಯಲಾಗಿದೆ. ಲೀಸ್ ಅವಧಿ ಮುಗಿಯುವ ಮೊದಲೇ 2009ರಲ್ಲಿ ಹೊಸ ಕಚೇರಿ ನಿರ್ಮಾಣವಾಗಿದ್ದರಿಂದ ಇಲ್ಲಿದ್ದ ಕಚೇರಿಗಳು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿವೆ. ಬಳಿಕ ಹಳೆಯ ಕಚೇರಿಯತ್ತ ಯಾರೊಬ್ಬರೂ ಗಮನಹರಿಸಿಲ್ಲ.

-ಜಯಂತ ತಿಣೈಕರ ಸಾಮಾಜಿಕ ಕಾರ್ಯಕರ್ತ

ಸ್ಟೇಷನ್ ರಸ್ತೆಯಲ್ಲಿರುವ ತಾಲ್ಲೂಕು ಪಂಚಾುಯಿತಿ ಒಡೆತನದ ವಾಣಿಜ್ಯ ಮಳಿಗೆಗಳ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ. ಈ ವಿಷಯವನ್ನು ಅನೇಕ ಬಾರಿ ತಾಲ್ಲೂಕು ಪಂಚಾಯಿತಿ ಅಧಿಕಾರಿ ಗಮನಕ್ಕೆ ತಂದರೂ ಗಮನಹರಿಸುತ್ತಿಲ್ಲ.

-ಜಾರ್ಡನ್ ಗೋನ್ಸಾಲ್ವಿಸ್. ಹೋರಾಟಗಾರ

ಸಿಪಿಐ ಕಚೇರಿ ಪೊಲೀಸ್ ಠಾಣೆಯ ಹಳೆಯ ಕಟ್ಟಡಗಳ ದುರಸ್ತಿ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ಕಚೇರಿಗಳ ಬಳಕೆಯ ಬಗ್ಗೆ ಮೇಲಧಿಕಾರಿಗಳ ಜೊತೆ ಚರ್ಚಿಸಲಾಗುವುದು. -ಲಾಲಸಾಬ್ ಗೌಂಡಿ ಇನ್ಸ್ಪೆಕ್ಟರ್

ತಾಲ್ಲೂಕು ಪಂಚಾಯಿತಿ ಹೆಸರಲ್ಲಿ ಬಹಳಷ್ಟು ಆಸ್ತಿ ಇರುವುದು ಗಮನಕ್ಕೆ ಬಂದಿದೆ. ವಾಣಿಜ್ಯ ಮಳಿಗೆಗಳ ಅವಧಿ ಮುಗಿದಿರುವ ಕುರಿತು ಹಲವರು ಮನವಿ ಸಲ್ಲಿಸಿದ್ದು ಈ ವಿಷಯವನ್ನು ಸಿ.ಇ.ಒ ಅವರ ಗಮನಕ್ಕೆ ತರಲಾಗಿದೆ.

-ರಮೇಶ ಮೇತ್ರಿ ತಾ.ಪಂ ಇ.ಒ

ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಕಟ್ಟಡ ಶಾಸಕರ ಕಚೇರಿಗಾಗಿ ಸೂಕ್ತವಾಗಿಲ್ಲ ಎಂಬ ಕಾರಣಕ್ಕೆ ಪಟ್ಟಣದ ಹೊರವಲಯದ ದೇವರಾಜ್ ಅರಸ್ ಸಮುದಾಯ ಭವನ ಮಾಡಿಕೊಳ್ಳಗಿದೆ. ಶಾಸಕರ ಕಚೇರಿ ವಿಷಯದಲ್ಲಿ ರಾಜಕಾರಣ ಮಧ್ಯ ಪ್ರವೇಶಿಸಿದ್ದರಿಂದ ಇದುವರೆಗೂ ತಾಲ್ಲೂಕಿನಲ್ಲಿ ಶಾಸಕರ ಕಚೇರಿ ಆರಂಭಿಸಲು ಸೂಕ್ತ ಸ್ಥಳ ಸಿಕ್ಕಿಲ್ಲ.

-ವಿಠ್ಠಲ ಹಲಗೇಕರ ಶಾಸಕ

ಶಾಸಕರಿಗೂ ಬೇಡವಾದ ಕಚೇರಿ

ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಶಾಸಕರ ಸಂಪರ್ಕ ಕಚೇರಿಯನ್ನು ಒದಗಿಸಲಾಗಿದೆ. ಅವರು ಬಳಸದ ಕಾರಣ ಬೀಗ ಜಡಿದ ಸ್ಥಿತಿಯಲ್ಲಿದೆ. ಹಿಂದಿನ ಶಾಸಕರು ಮತ್ತು ಈಗಿನ ಶಾಸಕರು ಈ ಕಚೇರಿಗೆ ಭೇಟಿ ನೀಡದ ಕಾರಣ ಕಚೇರಿ ನಿರ್ವಹಣೆಯತ್ತ ಸಂಬಂಧಪಟ್ಟವರೂ ಗಮನಹರಿಸಿಲ್ಲ. ಇದನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಚೇರಿಗೆ ನೀಡಲಾಗಿದೆ.

ಬಾರ್ ಆದ ಹಳೆಯ ನ್ಯಾಯಾಲಯ ಕಟ್ಟಡ!

ಹಳೆಯ ನ್ಯಾಯಾಲಯ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಸುತ್ತಮುತ್ತ ಮದ್ಯದಂಗಡಿಗಳಿರುವ ಕಾರಣ ನಿತ್ಯ ಸಂಜೆಯಾಗುತ್ತಲೇ ಈ ಕಟ್ಟಡ ಬಾರ್ ಆಗಿ ಪರಿವರ್ತನೆ ಆಗುತ್ತಿದೆ. ಒಂದು ಕಾಲದಲ್ಲಿ ನ್ಯಾಯದಾನಕ್ಕೆ ಹೆಸರಾಗಿದ್ದ ಈ ಸ್ಥಳದಲ್ಲಿ ನಿತ್ಯ ಸಂಜೆ ಮಾಂಸದ ಅಂಗಡಿಗಳು ತಲೆ ಎತ್ತುತ್ತವೆ. 20ಕ್ಕೂ ಹೆಚ್ಚು ಅಕ್ರಮ ಮಳಿಗೆಗಳು ನಿರ್ಮಾಣವಾಗಿವೆ. ಈ ಮಳಿಗೆಗಳಿಗೆ ಹೆಸ್ಕಾಂ ವಿದ್ಯುತ್ ಸೌಲಭ್ಯ ಒದಗಿಸಿದೆ. ಜಾಗವನ್ನು ತನ್ನ ಸುಪರ್ದಿಗೆ ಪಡೆದು ವಾಣಿಜ್ಯ ಸಂಕೀರ್ಣ ನಿರ್ಮಿಸಬೇಕು ಎಂದು ಜನ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.