ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

15ಕ್ಕೆ ಸಿದ್ಧೇಶ್ವರ ಜಾತ್ರೆ: ಪೂರ್ವಭಾವಿ ಸಭೆ

Published 3 ಜನವರಿ 2024, 15:46 IST
Last Updated 3 ಜನವರಿ 2024, 15:46 IST
ಅಕ್ಷರ ಗಾತ್ರ

ಕಾಗವಾಡ: ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಯಾದ ತಾಲ್ಲೂಕಿನ ಐನಾಪುರ ಸಿದ್ಧೇಶ್ವರ ಜಾತ್ರೆ ಜ.15ರಂದು ನಡೆಯಲಿದ್ದು, ಯಾವುದೇ ಅಹಿತಕರ ಘಟನೆಗಳು, ಎತ್ತುಗಳ ಹಾಗೂ ಕುದುರೆ ಷರ್ಯತ್ತುಗಳು ಇರುವುದರಿಂದ ಪ್ರಾಣಿ ಹಿಂಸೆ ಆಗದಂತೆ ಜಾತ್ರಾ ಕಮಿಟಿಯವರು ನಿಗಾವಹಿಸಬೇಕು ಎಂದು ಕಾಗವಾಡ ಠಾಣೆಯ ಪಿಎಸ್ಐ ಎಂ.ಬಿ. ಬಿರಾದರ ತಿಳಿಸಿದರು.

ಪಟ್ಟಣದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ನಡೆದ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಷರ್ಯತ್ತುಗಳಲ್ಲಿ ಭಾಗವಹಿಸಿದ ದನಗಳ ವೈದ್ಯಕೀಯ ಪರೀಕ್ಷೆ ನಡೆಸಿ ಪ್ರಮಾಣಪತ್ರ ನೀಡಬೇಕು. ದನಗಳಿಗೆ ಬಡಿಗೆಗಳಿಂದ ಬಡಿಯುವುದು ಸೇರಿದಂತೆ ಹಿಂಸೆ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಸಿ.ಸಿ. ಕ್ಯಾಮೇರಾಗಳನ್ನು ಅಳವಡಿಸಿ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ನಿಗಾವಹಿಸಬೇಕು. ಜಾತ್ರಾ ಕಮಿಟಿಯೊಂದಿಗೆ ಇಲಾಖೆ ಸಹಕರಿಸುತ್ತದೆ ಎಂದರು.

ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಾಹಾಂತೇಶ ಕವಲಾಪುರ ಮಾತನಾಡಿದರು. ಸುಭಾಷಗೌಡ ಪಾಟೀಲ, ಅಮಗೊಂಡ ಒಡೆಯರ, ಅಭಿನಂದನ ಪಾಟೀಲ, ಸಂಜೀವ್ ಬಿರಡಿ, ಗುರುರಾಜ ಮಡಿವಾಳರ, ಪ್ರಕಾಶ ಗಾಣಿಗೇರ, ಸೋಮು ಚಮಕೇರಿ, ವಿಜಯ್ ನರಗಟ್ಟಿ ಸುರೇಶ ಅಡಿಸೇರಿ, ಸೋಮಲಿಂಗ ಒಡೆಯರ, ಗುಂಡು ಝುಂಜರವಾಡ ಮಲ್ಲಿಕಾರ್ಜುನ ಕೋಲಾರ, ರಾವಸಾಬ ಪಾಟೀಲ, ದಿಲೀಪ್ ಶಿಂದೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT