ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಪ್‌ಸೆಟ್‌ ವಶ: ಆರೋಪಿಗಳ ಬಂಧನ

Published 4 ಆಗಸ್ಟ್ 2023, 16:29 IST
Last Updated 4 ಆಗಸ್ಟ್ 2023, 16:29 IST
ಅಕ್ಷರ ಗಾತ್ರ

ಬೈಲಹೊಂಗಲ: ಮಲಪ್ರಭಾ ನದಿಯ ದಡದಲ್ಲಿ ರೈತರು ಅಳವಡಿಸಿದ್ದ ವಿದ್ಯುತ್‌ ಪಂಪಸೆಟ್‌ಗಳ ಕಳ್ಳತನ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆರೋಪಿಗಳಿಂದ ಪಂಪ್‌ಸೆಟ್‌ ಹಾಗೂ ವಾಹನ ಸೇರಿ ₹5ಲಕ್ಷ ಮೌಲ್ಯದ ವಸ್ತುಗಳನ್ನೂ ವಶಕ್ಕೆ ಪಡೆಯಲಾಗಿದೆ.

ತಾಲ್ಲೂಕಿನ ಇಂಗಳ ಗ್ರಾಮದ ವ್ಯಾಪ್ತಿಯ ಮಲಪ್ರಭಾ ನದಿಯ ದಂಡೆಯ ಜಾಕ್‌ವೆಲ್ ಹತ್ತಿರ ಹೊಸೂರು ಗ್ರಾಮದ ರೈತರು ಈ ಪಂಪ್‌ಸೆಟ್‌ಗಳನ್ನು ಅಳವಡಿಸಿದ್ದರು. ಈಚೆಗೆ ಕಳ್ಳತನ ಮಾಡಿದ ಬಗ್ಗೆ ಮುರಗೋಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಮುರಗೋಡ ಪೊಲೀಸರು ಸಾಮಗ್ರಿಗಳ ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT