ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಟ ದರ್ಶನ್‌ ವರ್ತನೆ ಒರಟು: ವಿನಯ ಕುಲಕರ್ಣಿ

Published 18 ಜೂನ್ 2024, 13:08 IST
Last Updated 18 ಜೂನ್ 2024, 13:08 IST
ಅಕ್ಷರ ಗಾತ್ರ

ಬೆಳಗಾವಿ: ‘ನಟ ದರ್ಶನ್‌ ವರ್ತನೆ ಒರಟಾಗಿದೆ. ಆದರೆ, ನಮ್ಮೊಂದಿಗೆ ಆ ರೀತಿ ವರ್ತಿಸುತ್ತಿರಲಿಲ್ಲ. ರೇಣುಕಸ್ವಾಮಿ ಕೊಲೆ ಯಾರು ಮಾಡಿದ್ದಾರೆ ಎಂಬುದನ್ನು ನ್ಯಾಯಾಲಯ ತೀರ್ಮಾನಿಸಲಿದೆ. ನಾನು ಏನನ್ನೂ ಹೇಳುವುದಿಲ್ಲ’ ಎಂದು ಧಾರವಾಡ ಶಾಸಕ ವಿನಯ ಕುಲಕರ್ಣಿ ಹೇಳಿದರು.

‘ಪ್ರಕರಣದಿಂದ ದರ್ಶನ್ ಅವರನ್ನು ಕಾಪಾಡಲು ಯಾರೂ ಒತ್ತಡ ಹೇರಿಲ್ಲ. ಈ ಪ್ರಕರಣದ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ. ಮಾಧ್ಯಮಗಳಲ್ಲೂ ಸಾಕಷ್ಟು ವರದಿ ಪ್ರಸಾರವಾಗುತ್ತಿದೆ. ಒತ್ತಡ ಹೇರುವ ಪ್ರಶ್ನೆ ಬರುವುದಿಲ್ಲ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT