ಶನಿವಾರ, ಡಿಸೆಂಬರ್ 7, 2019
21 °C

ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ: ಕೇಂದ್ರ ಸರ್ಕಾರವು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ಖಂಡಿಸಿ ಇಲ್ಲಿ ವಕೀಲರು ಗುರುವಾರ ನ್ಯಾಯಾಲಯ ಪಕ್ಕದ ಐನಾಪುರ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

‘ತಿದ್ದುಪಡಿಯಿಂದ ಜನಸಾಮಾನ್ಯರಿಗೆ ಹೊರೆಯಾಗಿದೆ. ಕೂಡಲೇ ಇದನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದಲ್ಲಿ ವಕೀಲರ ಸಂಘದಿಂದ ಕಾನೂನು ಹೋರಾಟ ನಡೆಸಬೇಕಾಗುತ್ತದೆ’ ಎಂದು ತಿಳಿಸಿದರು.

ಅಥಣಿ ವಕೀಲರ ಸಂಘದ ಅಧ್ಯಕ್ಷ ಕೆ.ಎ. ವಣಜೋಳ, ವಕೀಲರಾದ ಸುನೀಲ ಸಂಕ, ಲೆನಿನ್ ಹಳಿಂಗಳಿ ಮಾತನಾಡಿದರು.

ಉಪತಹಶೀಲ್ದಾರ್‌ ಎಸ್.ಡವಳೇಶ್ವರ ಅವರಿಗೆ ಮನವಿ ಸಲ್ಲಿಸಿದರು.

ವಕೀಲರಾದ ಶ್ರೀಕಾಂತ ಪೂಜಾರಿ, ರಾಘವೇಂದ್ರ ಹಳಿಂಗಳಿ, ಆನಂದ ಹಿಪ್ಪರಗಿ, ಸದಾಶಿವ ಕಾಂಬಳೆ, ಪ್ರಮೋದ ಬಿಳ್ಳೂರ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು