ಕಾಗವಾಡ: ತಾಲೂಕಿನ ಐನಾಪುರ ಪಟ್ಟಣದಲ್ಲಿ ಅಥಣಿ ಶಾಸಕ ಲಕ್ಷಣ ಸವದಿಯವರ 66ನೇ ಜನ್ಮದಿನದ ನಿಮಿತ್ತ ಅವರ ಅಭಿಮಾನಿಗಳು ಏರ್ಪಡಿಸಿದ್ದ ರಾಷ್ಟ್ರಮಟ್ಟದ ಎ ಗ್ರೇಡ್ ಕಬಡ್ಡಿ ಅಂತಿಮ ಪಂದ್ಯದಲ್ಲಿ ಬೆಳಗಾವಿಯ ಪ್ರಣಯ ಪೂಜಾರಿ ಸ್ಪೋರ್ಟ್ಸ್ ತಂಡವು ಬಾರಾಮತಿ ಅಂಕಿತ ಪಾಟೀಲ 4 ಅಂಕಗಳಿಂದ ಸೋಲಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು.

ಈ ವೇಳೆ ಮಾತನಾಡಿದ ಮುಖಂಡ ಚಿದಾನಂದ ಸವದಿ, ಕಬ್ಬಡ್ಡಿಯ ತವರೂರಾದ ಐನಾಪೂರ ಪಟ್ಟಣದ ಕ್ರೀಡಾಭಿಮಾನಿಗಳ ಉತ್ಸಾಹ ಅಭಿಮಾನ ಕಂಡು ಖುಷಿಯಾಗಿದೆ. ಎಲ್ಲರ ಪ್ರೀತಿ, ಅಭಿಮಾನ, ಆಶೀರ್ವಾದ ಹೀಗೆ ನಮ್ಮ ಮೇಲೆ ಇರಲಿ. ಎಲ್ಲರ ಅಪೇಕ್ಷೆಯ ಮೇರೆಗೆ ಮುಂದಿನ ವರ್ಷವೂ ಮತ್ತೇ ಇದೇ ಮೈದಾನದಲ್ಲಿ ಶಾಸಕ ಲಕ್ಷ್ಮಣ ಸವದಿಯವರ ಜನ್ಮದಿನದಂದು ರಾಷ್ಟ್ರ ಮಟ್ಟದ್ದ ಕಬ್ಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗುವುದು ಎಂದು ಘೋ಼ಷಿಸಿದರು.

ಬೆಳಗಾವಿಯ ಪ್ರಣಯ ಪಾಟೀಲ ಫೌಂಡೇಷನ್ ತಂಡವು ಪ್ರಥಮ ಸ್ಥಾನ ಗಳಿಸಿ ₹1 ಲಕ್ಷ ನಗದು ಹಾಗೂ ಪಾರಿತೋಷಕವನ್ನು ಮುಡಿಗೇರಿಸಿಕೊಂಡಿತು. ಮಹಾರಾಷ್ಟ್ರದ ಬಾರಾಮತಿ ಅನಿಕೇತನ ಪಾಟೀಲ ಫೌಂಡೇಷನ್ ತಂಡ ದ್ವೀತಿಯ ಸ್ಥಾನ ಪಡೆದು ₹75 ಸಾವಿರ ಹಾಗೂ ಟ್ರಾಫಿ ಪಡೆಯಿತು. ತೃತಿಯ ಸ್ಥಾನ ಬಾರಾಮತಿಯ ಅಕಾಡೆಮಿ ತಂಡ ಪಡೆದು ₹50 ಸಾವಿರ ಪಾರಿತೋಷಕ ಪಡೆದರೆ, ರೈಸಿಂಗ್ ಬುಲ್ಸ್ ಬೆಂಗಳೂರು ಚತುರ್ಥ ಸ್ಥಾನ ಪಡೆದು ₹25 ಸಾವಿರ ರೂ ಬಹುಮಾನ ಪಡೆದುಕೊಂಡಿತು.

ಅತ್ಯುತ್ತಮ ದಾಳಿಗಾರ ಬಾರಾಮತಿಯ ವಿರೇಂದ್ರ, ಅತ್ಯುತ್ತಮ ಹಿಡಿತಗಾರ ರೈಸಿಂಗ್ ಬುಲ್ ಬೆಂಗಳೂರಿನ ರಜತ್, ಸರ್ವೋತ್ತಮ ಆಟಗಾರ ಪ್ರಣಯ ಪೂಜಾರಿ ಫೌಂಡೇಷನ ಪ್ರೋ ಕಬಡ್ಡಿ ಆಟಗಾರ ಗಣೇಶನಿಗೆ ಪಾರಿತೋಷಕಗಳನ್ನು ಚಿದಾನಂದ ಸವದಿ ನೀಡಿ ಗೌರವಿಸಿದರು.

ಉದ್ಯಮಿ ಶಿವಕುಮಾರ ಸವದಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಕುಚನೂರೆ, ಸಂಜಯ ಭಿರಡಿ, ಜ್ಯೋತಿಕುಮಾರ ಪಾಟೀಲ, ವಿನಾಯಕ ಬಾಗಡಿ, ದಾದಾಸಾಬ ಜಂತೆನ್ನವರ, ರಮೇಶ ಚೌಗಲಾ, ಯಶವಂತ ಪಾಟೀಲ, ಅಪ್ಪು ಪೂಜಾರಿ, ಸುರೇಶ ವಾಘಮೊಡೆ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.