ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಲಹೊಂಗಲ: ಸ್ಲೀಪರ್ ಕೋಚ್ ಬಸ್ ಆರಂಭಕ್ಕೆ ಮನವಿ

Published 22 ಡಿಸೆಂಬರ್ 2023, 13:01 IST
Last Updated 22 ಡಿಸೆಂಬರ್ 2023, 13:01 IST
ಅಕ್ಷರ ಗಾತ್ರ

ಬೈಲಹೊಂಗಲ: ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ ಬೆಂಗಳೂರಿಗೆ ಪ್ರತಿದಿನ ಸ್ಲಿಪರ್ ಕ್ಲಾಸ್ ಬಸ್ ಸಂಚಾರ ಮರು ಪ್ರಾರಂಭಿಸುವಂತೆ ಒತ್ತಾಯಿಸಿ ಪಟ್ಟಣದ ನಾಗರಿಕರು ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಎಸ್.ಎಸ್.ಬಳಿಗಾರ ಮಾತನಾಡಿ, ‘ಪಟ್ಟಣವು ಸುಮಾರು 70 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ. ಪ್ರತಿದಿನ 6–8 ಖಾಸಗಿ ಬಸ್‍ಗಳು ಬೈಲಹೊಂಗಲದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತವೆ. ಪಟ್ಟಣ ಸೇರಿ ಸುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು, ನೌಕರರು, ವ್ಯಾಪಾರಸ್ಥರು ವಿವಿಧ ಕಾರ್ಯಗಳಿಗಾಗಿ ಓಡಾಡುತ್ತಾರೆ. ಬೈಲಹೊಂಗಲ ಸಾರಿಗೆ ಘಟಕದಿಂದ ಸಂಜೆ ವೇಳೆ ಬೆಂಗಳೂರಿಗೆ ಯಾವುದೇ ಬಸ್ ಇಲ್ಲದಿರುವುದು ತೊಂದರೆಯಾಗುತ್ತಿದೆ’ ಎಂದು ಗಮನ ಸೆಳೆದರು.

‘ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್‌ನವರು ತಮಗೆ ಬೇಕಾದಂತೆ ಪ್ರಯಾಣ ದರ ಏರಿಸುತ್ತಾರೆ. ಆದ್ದರಿಂದ ಬೈಲಹೊಂಗಲ ಸಾರಿಗೆ ಘಟಕದಿಂದ ಪ್ರತಿ ರಾತ್ರಿ ಒಂದು ಸ್ಲೀಪರ್ ಬಸ್ ಪ್ರಾರಂಭಿಸಿದರೆ ಅನುಕೂಲವಾಗುತ್ತದೆ’ ಎಂದರು.

ಎಂ.ಸಿ.ಹಂಗರಕಿ, ಎಂ.ಬಿ.ಗರಗದ, ಸಿ.ಎಸ್.ಆರಾದ್ರಿಮಠ, ಬಿ.ಆರ್.ಬೋರಗಲ್, ಎಫ್.ಬಿ.ಹೂಲಿ, ಪಿ.ಟಿ.ಹಸರಂಗಿ, ಎ.ಎಸ್.ತಟವಟಿ, ವಿ.ಪಿ.ಅಸುಂಡಿ, ಎಸ್.ಜಿ.ಚಿಟ್ನಿಸ, ಎಂ.ಬಿ.ಬೆನಕಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT