ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಡಿಯಲ್ಲಿ ಮೂವರು ವಿಶೇಷಾಧಿಕಾರಿಗಳ ನೇಮಕ

Published 19 ಫೆಬ್ರುವರಿ 2024, 16:18 IST
Last Updated 19 ಫೆಬ್ರುವರಿ 2024, 16:18 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕ– ಮಹಾರಾಷ್ಟ್ರ ಗಡಿ ಭಾಗದ ಮರಾಠಿಗರ ಸಮಸ್ಯೆ ಆಲಿಸಲು ಮಹಾರಾಷ್ಟ್ರ ಸರ್ಕಾರ ಇಬ್ಬರು ಸಮನ್ವಯಿಕ ವಿಶೇಷ ಅಧಿಕಾರಿಗಳು ಮತ್ತು ಒಬ್ಬ ತಹಶೀಲ್ದಾರ್‌ ಹಂತದ ಅಧಿಕಾರಿಯನ್ನು ನಿಯೋಜಿಸಿ, ಸೋಮವಾರ ಆದೇಶ ಹೊರಡಿಸಿದೆ. ಫೆಬ್ರುವರಿ 24ರಂದು ಅಧಿಕಾರ ವಹಿಸಿಕೊಳ್ಳಲು ಅವರಿಗೆ ಸೂಚಿಸಲಾಗಿದೆ.

ಕರ್ನಾಟಕದೊಳಗಿನ 865 ಹಳ್ಳಿ– ಪಟ್ಟಣಗಳ ಮರಾಠಿಗರು ಸಮಸ್ಯೆ ಹೇಳಿಕೊಳ್ಳಲು, ಸೌಕರ್ಯ ಪಡೆಯಲು ಅನುಕೂಲವಾಗುವಂತೆ ಗಡಿಯಲ್ಲಿ ಕಚೇರಿ ಸ್ಥಾಪಿಸಿ, ಅಧಿಕಾರಿಗಳನ್ನು ನಿಯೋಜಿಸುವಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮುಖಂಡರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ಕೋರಿದ್ದರು.

‘ಬೆಳಗಾವಿಯಿಂದ 15 ಕಿ.ಮೀ ಅಂತರದಲ್ಲಿರುವ  ಮಹಾರಾಷ್ಟ್ರದ ಶಿನೋಳಿ ಗ್ರಾಮದಲ್ಲಿ ವಿಶೇಷ ಕಚೇರಿ ತೆರೆದು, ಚಂದಗಡದ ಉಪವಿಭಾಗಾಧಿಕಾರಿ ಚಂದ್ರಕಾಂತ ವಾಘಮೋರೆ ಅವರನ್ನೇ ಈ ಕಚೇರಿಯ ಮೊದಲ ಅಧಿಕಾರಿ ಆಗಿ ನಿಯೋಜಿಸಲಾಗಿದೆ’ ಎಂದು ಮೂಲಗಳು ಖಚಿತಪಡಿಸಿವೆ.

ಸುಪ್ರೀಂನತ್ತ ಮಹಾರಾಷ್ಟ್ರ: ‘ರಾಜ್ಯದ ನಾಮಫಲಕಗಳಲ್ಲಿ ಶೇ 65ರಷ್ಟು ಕನ್ನಡ ಕಡ್ಡಾಯ ಮಾಡಿದ್ದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡುವುದಾಗಿ ಮಹಾರಾಷ್ಟ್ರದ ಗಡಿ ಉಸ್ತುವಾರಿ ಮಂತ್ರಿಗಳು ಬಹಿರಂಗ ಹೇಳಿಕೆ ನೀಡಿದ್ದಾರೆ.  ನಮ್ಮ ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT