ಮಂಗಳವಾರ, ಅಕ್ಟೋಬರ್ 26, 2021
20 °C

ಅರ್ಬಾಜ್‌ ಪ್ರಕರಣ: ತಂಡದಿಂದ ಸತ್ಯಶೋಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಖಾನಾಪುರದಲ್ಲಿ ಈಚೆಗೆ ನಡೆದಿರುವ ಅರ್ಬಾಜ್ ಮುಲ್ಲಾ ಅನುಮಾನಾಸ್ಪದ ಸಾವಿನ ಪ್ರಕರಣದ ಸತ್ಯಶೋಧನೆಗಾಗಿ ಬೆಂಗಳೂರಿನಿಂದ ಇಲ್ಲಿಗೆ ಗುರುವಾರ ಭೇಟಿ ನೀಡಿದ್ದ ಪ್ರಗತಿಪರ ಯುವಜನರನ್ನೊಳಗೊಂಡ ತಂಡ ಹಲವು ಮಾಹಿತಿಯನ್ನು ಕಲೆಹಾಕಿತು.

ಅರ್ಜಾಜ್‌ ತಾಯಿ, ಪೊಲೀಸ್ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಸಂಘಟನೆಗಳ ಮುಖಂಡರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

‘ಸಂಪೂರ್ಣವಾಗಿ ಮಾಹಿತಿ ಸಂಗ್ರಹಿಸಿ ಬಳಿಕ, ಸತ್ಯಶೋಧನಾ ವರದಿ ಪ್ರಕಟಿಸಲಾಗುವುದು. ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ತಂಡದ ಸದಸ್ಯ ಆಕಾಶ್ ಬಟ್ಟಾಚಾರ್ಯ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ವಕೀಲ ಅವನಿ ಚೌಕ್ಸಿ, ನಿಜಾಮುದ್ದೀನ್, ಸಿದ್ದಾರ್ಥ ಜೋಶಿ, ತನ್ವೀರ್ ಅಹಮದ್, ಜಾಕೀರ್, ಜುನೇದ್ ಒಳಗೊಂಡ ತಂಡವು ವರದಿ ಸಿದ್ಧಪಡಿಸುತ್ತಿದೆ. ಮಾನವ ಹಕ್ಕುಗಳ ಆಯೋಗಕ್ಕೂ ವರದಿ ಸಲ್ಲಿಸುವುದಾಗಿ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.