ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ: ಯೋಧನಿಂದ ಜಿಲ್ಲಾಧಿಕಾರಿಗೆ ದೂರು

Last Updated 16 ಜೂನ್ 2021, 12:27 IST
ಅಕ್ಷರ ಗಾತ್ರ

ಬೆಳಗಾವಿ: ‘ದೇವಸ್ಥಾನದಜಾಗದವಿಚಾರವಾಗಿಗ್ರಾಮದ ಪಂಚಸಮಿತಿಯವರು ತಮ್ಮಕುಟುಂಬಕ್ಕೆ ಆರು ತಿಂಗಳಿಂದಲೂ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ’ ಎಂದು ಯೋಧ,ತಾಲ್ಲೂಕಿನ ಗೌಂಡವಾಡದ ದೀಪಕ್ ಪಾಟೀಲಆರೋಪಿಸಿದರು.

ಸೇನಾ ಸಮವಸ್ತ್ರದಲ್ಲಿ ಕುಟುಂಬಸಮೇತವಾಗಿಬಂದುಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮನವಿ ಸಲ್ಲಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮದ್ರಾಸ್ ರೆಜಿಮೆಂಟ್‌ಗೆ ಸೇರಿದ ನಾನು ಶ್ರೀನಗರದಲ್ಲಿ ಹವಾಲ್ದಾರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಗ್ರಾಮದವರು ಕೇಳುತ್ತಿರುವ 5 ಎಕರೆ ಜಮೀನು ನಮ್ಮ ಕಾಕಾ ಅಶೋಕ ಪಾಟೀಲ ಅವರಿಗೆ ಸೇರಿದ್ದಾಗಿದೆ. ಅವರಿಗೆ ಬೆಂಬಲ ಕೊಡುತ್ತಿದ್ದೇವೆ ಎಂದು ಪಂಚಸಮಿತಿಯವರು ನಮಗೆ ಬಹಿಷ್ಕಾರ ಹಾಕಿದ್ದಾರೆ’ ಎಂದು ತಿಳಿಸಿದರು.

‘ಗಣಪತಿ, ಕಾಲಭೈರವ ದೇವಸ್ಥಾನಕ್ಕೆ ಸೇರಿದ ಜಮೀನದು ಎಂದು ಪಂಚರು ಹೇಳುತ್ತಿದ್ದಾರೆ. ವಿವಾದ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ನೀಡುವ ತೀರ್ಪಿನಂತೆ ಆಗಲಿ. ಹೀಗಿರುವಾಗ, ನಮಗೆ ಬಹಿಷ್ಕಾರ ಹಾಕುವುದು ಎಷ್ಟು ಸರಿ? ನಮ್ಮ ಜಮೀನಿನ ಕೆಲಸಕ್ಕೆ ಯಾರೂ ಬಾರದಂತೆ ಮಾಡಿದ್ದಾರೆ. ಅಂಗಡಿಗೆ, ದೇವಸ್ಥಾನಕ್ಕೆ ನಿರ್ಬಂಧಿಸಿದ್ದಾರೆ. ತರಕಾರಿ ಖರೀದಿಗೂ ತೊಂದರೆ ಕೊಡುತ್ತಿದ್ದಾರೆ. ಮಕ್ಕಳೊಂದಿಗೂ ಮಾತನಾಡುತ್ತಿಲ್ಲ. ನಮ್ಮೊಂದಿಗೆ ಯಾರಾದರೂ ಮಾತನಾಡಿದರೆ ₹ 1ಸಾವಿರ ದಂಡ ವಿಧಿಸುವುದಾಗಿ ತಿಳಿಸಿದ್ದಾರೆ’ ಎಂದು ಆರೋಪಿಸಿದರು.

‘ಹೋದ ವರ್ಷವೂ ನಮ್ಮ ಮನೆ ಮೇಲೆ ಕೆಲವರು ದಾಳಿ ಮಾಡಿದ್ದರು. ಇದೇ 6ರಂದು ಮತ್ತೆ ದಾಂದಲೆ ನಡೆಸಿದ್ದಾರೆ. ಮನೆಯ ಟಿವಿ, ಪೀಠೋಪಕರಣ ಹಾಳು ಮಾಡಿದ್ದಾರೆ. ಈ ಬಗ್ಗೆ ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

‘ಹಲವು ವರ್ಷಗಳಿಂದ ದೇಶ ರಕ್ಷಣೆ ಸೇವೆ ಮಾಡುತ್ತಿದ್ದೇನೆ. ಆದರೆ, ಕುಟುಂಬದವರನ್ನು ರಕ್ಷಿಸಿಕೊಳ್ಳಲು ಆಗುತ್ತಿಲ್ಲ. ದೇಶ ಸೇವೆ ಮಾಡುತ್ತಿರುವುದಕ್ಕೆ ಪ್ರಯೋಜನವೇನು?’ ಎಂದು ಕೇಳಿದರು. ‘ಅಧಿಕಾರಿಗಳು ನ್ಯಾಯ ಕೊಡಿಸಬೇಕು’ ಎಂದು ಕೋರಿದರು.

ಜೂನ್‌ 6ರಂದು ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಗೆ ನಡೆದಿತ್ತು. ತಲಾ 8 ಮಂದಿ ವಿರುದ್ಧ ಕಾಕತಿ ಠಾಣೆಯಲ್ಲಿ ದೂರು–ಪ್ರತಿ ದೂರು ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT