ಬೆಳಗಾವಿ: ಖಾಲಿ ನಿವೇಶನದಲ್ಲಿ ಫಲಕ ಅಳವಡಿಸುವುದಕ್ಕೆ ಪಕ್ಕದ ಮನೆಯವರ ಮೇಲೆ ಹಲ್ಲೆ ನಡೆಸಿದ್ದ ಐವರಿಗೆ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ಹಾಗೂ ₹65 ಸಾವಿರ ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ತಾಲ್ಲೂಕಿನ ಬಸವನ ಕುಡಚಿಯ ಕಿರಣ ಮಾಣಿಕ ಪಾಟೀಲ, ಅಮಿತ ಅಪ್ಪಣ್ಣ ಪಾಟೀಲ, ಶ್ರೀಕಾಂತ ದೇವೇಂದ್ರ ಪಾಟೀಲ, ಮಹೇಂದ್ರ ಬಸವಂತ ಪಾಟೀಲ ಹಾಗೂ ಸುನೀಲ ಬಾಹು ಪಾಟೀಲ ಶಿಕ್ಷೆಗೆ ಗುರಿಯಾದವರು.

2015ರಲ್ಲಿ ಬಸವನ ಕುಡಚಿಯ ನಾಗದೇವ ಗಲ್ಲಿಯಲ್ಲಿನ ಖಾಲಿ ನಿವೇಶನಕ್ಕೆ ಪಾಲಿಕೆಯಿಂದ ಫಲಕ ಅಳವಡಿಸುವ ಕಾರ್ಯ ನಡೆದಿತ್ತು. ಇದಕ್ಕೆ ಸುಜಾತಾ ಅರ್ಜು ಯಲ್ಲಮ್ಮನವರ ದಂಪತಿ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಈ ಐವರು ಹಲ್ಲೆ ಮಾಡಿದ್ದರು.

ಮಾಳಮಾರುತಿ ಠಾಣೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಹಂತದಲ್ಲಿ ಪ್ರಕರಣದ ಮೊದಲ ಆರೋಪಿ ಪ್ರಮೋದ ಮತ್ತು 5ನೇ ಆರೋಪಿ ಮಲ್ಲಸರ್ಜ ಮೃತಪಟ್ಟಿದ್ದಾರೆ. ಇನ್ನುಳಿದ ಐವರಿಗೆ ನ್ಯಾಯಾಶರಾದ ಗುರುಪ್ರಸಾದ ಅವರು ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಮಹಾಂಂತೇಶ ಚಳಕ್ಪೊಪ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.