ಮೀನು ಹಿಡಿಯುವ ವಿಚಾರವಾಗಿ ಜಗಳ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಬೆಳಗಾವಿ: ತಾಲ್ಲೂಕಿನ ನಾವಗೆ ಗ್ರಾಮದ ಕೆರೆಯಲ್ಲಿ ಬುಧವಾರ ಮೀನು ಹಿಡಿಯುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ಹುಚ್ಚಾನಟ್ಟಿ ಗ್ರಾಮದ ಶಂಕರ ಪಾಟೀಲ (28) ಹಲ್ಲೆಯಿಂದ ಗಾಯಗೊಂಡವರು. ಅವರನ್ನು ಜಿಲ್ಲಾ ಆಸ್ಪತ್ರೆ ಸೇರಿಸಲಾಗಿದೆ.
ಶಂಕರ ಅವರು ನಾವಗೆ ಗ್ರಾಮದ ಕೆರೆಯಲ್ಲಿ ಎಂದಿನಂತೆ ಮೀನು ಹಿಡಿಯಲು ಹೋಗಿದ್ದರು. ಅದೇ ಜಾಗದಲ್ಲಿ ಮೀನು ಹಿಡಿಯಲು ಬಂದ ಇನ್ನೊಂದು ಗುಂಪಿನ ಯುವಕರು ತಕರಾರು ತೆಗೆದರು. ತಾವು ಕೇಳಿದ ಪ್ರಶ್ನೆಗೆ ಮರಾಠಿಯಲ್ಲಿ ಉತ್ತರ ನೀಡುವಂತೆ ಶಂಕರ ಅವರನ್ನು ಗದರಿಸಿದರು. ಆಗ ಶಂಕರ ಬೆಂಬಲಿಗರು ಕೂಡ ಸ್ಥಳಕ್ಕೆ ಬಂದರು. ಎರಡೂ ಗುಂಪಿನ ಯುವಕರ ಮಧ್ಯೆ ಗಲಾಟೆ ಗಲಾಟೆ ನಡೆಯಿತು.
ಈ ವೇಳೆ ಐವರು ಯುವಕರ ಗುಂಪು ಶಂಕರ ಅವರ ತಲೆ, ಕೈ, ಕಾಲುಗಳಿಗೆ ಬಡಿಗೆ, ಕಲ್ಲಿನಿಂದ ಹಲ್ಲೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.