ಅಥಣಿ: ಪಟ್ಟಣದಲ್ಲಿ ಗುರುವಾರ ವೀರ ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನಾ ಸ್ಥಳ ಫಲಕವನ್ನು ಗುತ್ತಿಗೆದಾರರೊಬ್ಬರು ತೆರವುಗೊಳಿಸಿದ ವೇಳೆ ಕನ್ನಡ ಪರ ಸಂಘಟನೆಗಳು ಹಾಗೂ ಪಂಚಮಸಾಲಿ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು .

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಮುನ್ಸೂಚನೆ ಇಲ್ಲದೆ, ಯಾವುದೇ ಅಧಿಕಾರಿಗಳ ಪರವಾನಿಗೆ ಇಲ್ಲದೆ ರಾಣಿ ಚೆನ್ನಮ್ಮರ ವೃತ್ತದ ಫಲಕ ತೆರವು ಮಾಡಿರುವುದು ಸರಿಯಲ್ಲ. ತೆರವುಗೊಳಿಸಿದ ಫಲಕವನ್ನು 24 ಗಂಟೆಯೊಳಗೆ ಮರು ಸ್ಥಾಪಿಸದೆ ಹೋದಲ್ಲಿ ಉಗ್ರ ಹೋರಾಟ ಮಾಡಲಾಗುವುದು. ನಾನು ಸಹ ಹೋರಾಟದಲ್ಲಿ ಭಾಗಿಯಾಗಿವು ಎಂದರು.

ಕರವೇ ಅಧ್ಯಕ್ಷ ಶಬ್ಬಿರ ಸಾತಬಚ್ಚೆ ಮಾತನಾಡಿ ಫಲಕ ತೆರವುಗೊಳಿಸಿದವರ ಮೇಲೆ ಪುರಸಭೆಯಿಂದ ಪ್ರಕರಣ ದಾಖಲಾಗಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ 2008 ರಲ್ಲಿ ನಾನು ಪುರಸಭೆ ಸದಸ್ಯರಾದ ಸಂಧರ್ಭದಲ್ಲಿ ರಾಣಿ ಚೆನ್ನಮ್ಮ ಮೂರ್ತಿ ಕೂರಿಸುವ ಸ್ಥಳಕ್ಕೆ ಪುರಸಭೆಯಲ್ಲಿ ಠರಾವೂ ಹಾಕಲಾಗಿತ್ತು. ಆದರೆ ಇವತ್ತು ನಾಮಫಲಕ ಕಿತ್ತಿರುವುದು ನೋವು ತಂದಿದೆ ಇದರ ಹಿಂದೆ ಯಾರ ಷಡ್ಯಂತ್ರವಿದೆ ಹಾಗೂ ಅವರ ಹಿಂದೆ ಯಾವ ಅಧಿಕಾರಿ ಇದ್ದಾರೆ. ಅವರ ಮೇಲೆ ಸೂಕ್ತ ಕ್ರಮವಾಗಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

ನಾಮಫಲಕ ತೆರವಿಗೆ ಪರವಾನಗಿ ಕೊಟ್ಟಿಲ್ಲ , ಈ ವಿಷಯಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರನನ್ನು ಕಚೇರಿಗೆ ಕರೆದು ಮಾಹಿತಿ ಪಡೆಯುವುದಾಗಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಹೇಳಿದರು .

ಪುರಸಭೆ ಸದಸ್ಯರಾದ ರಾಜಶೇಖರ ಗೂಡೊಡಗಿ, ರಾಮನಗೌಡಾ ಪಾಟೀಲ, ಪ್ರಮೋದ ಬೀಳ್ಳೂರ, ಮುಖಂಡರಾದ ನ್ಯಾಯವಾದಿ ಎಸ್.ಎಸ್.ಪಾಟೀಲ, ಸುಭಾಷ ನಾಯಿಕ, ಶಿವರುದ್ರ ಘೂಳಪ್ಪನವರ, ಅವಿನಾಶ ನಾಯಿಕ, ಸುಕುಮಾರ ಕಾಂಬಳೆ, ಮಂಜು ಹೋಳಿಕಟ್ಟಿ, ಸಂತೋಷ ಕಕಮರಿ, ಮಲ್ಲಿಕಾರ್ಜುನ ಅಂದಾನಿ, ರಾಜು ಕುಮಠಳ್ಳಿ, ಸಿದ್ದು ಹಂಡಗಿ, ಗೋಪಾಲ ಮಂಗಸೂಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.