ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷೆ ವೇಳೆ ನಕಲು ಪ್ರಯತ್ನ, 14 ಮಂದಿ ಬಂಧನ

Last Updated 24 ಅಕ್ಟೋಬರ್ 2021, 16:34 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಭಾನುವಾರ ನಡೆದ ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್ ಲಿಖಿತ ಪರೀಕ್ಷೆ ವೇಳೆ ಬ್ಲೂಟೂತ್ ಸಾಧನ‌ ಬಳಸಿ ನಕಲು ಮಾಡಲು ಯತ್ನಿಸಿದ ಇಬ್ಬರು ಅಭ್ಯರ್ಥಿಗಳು ಸೇರಿದಂತೆ 14 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅವರಿಂದ 33 ಮೊಬೈಲ್‌ಗಳು, 9 ಮಾಸ್ಟರ್ ಕಾರ್ಡ್ ಸಾಧನಗಳು, 19 ಬ್ಲೂಟೂತ್ ಉಪಕರಣಗಳು, 3 ಟ್ಯಾಬ್‌ಗಳು, 1 ಲ್ಯಾಪ್‌ಟಾಪ್, 1 ಪ್ರಿಂಟರ್, 1 ಕಾರು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ‌ ನಿಂಬರಗಿ ತಿಳಿಸಿದ್ದಾರೆ.

ಬ್ಲೂಟೂತ್ ಸಾಧನ ಬಳಸಿ ಪರೀಕ್ಷಾ ಅಕ್ರಮ‌ ಎಸಗಲು ಯತ್ನಿಸಿದ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಸಿಇಎನ್ ಠಾಣೆ ಹಾಗೂ ಡಿಸಿಐಬಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.‌

ರಾಮತೀರ್ಥ ನಗರದಲ್ಲಿರುವ ಎಸ್.ಎಸ್. ಡೆಕೊರೇಟರ್ ಮತ್ತು ಈವೆಂಟ್ ಪ್ಲ್ಯಾನರ್ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿ ಕುಳಿತಿದ್ದ ಕೆಲವರು ಮೊಬೈಲ್ ಫೋನ್ ಮತ್ತು ಬ್ಲೂಟೂತ್ ಸಾಧನ ಬಳಸಿ, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳನ್ನು ‌ಬಿಡಿಸಲು ಸಹಾಯ ಮಾಡುತ್ತಿದ್ದುದು ಕಂಡುಬಂದಿತು.‌ ಸ್ಥಳದಲ್ಲಿದ್ದ ಒಟ್ಟು 12 ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವನಿತಾ ‌ವಿದ್ಯಾಲಯ ಇಂಗ್ಲಿಷ್ ಮಾಧ್ಯಮ‌ ಶಾಲೆಯಲ್ಲಿ ಯುವತಿ ಹಾಗೂ ಸರ್ದಾರ್ ‌ಪಿಯು ಕಾಲೇಜಿನ ಕೇಂದ್ರದಲ್ಲಿ ಯುವಕನೊಬ್ಬ ಮಾಸ್ಟರ್ ಕಾರ್ಡ್ ಹಾಗೂ ಬ್ಲೂಟೂತ್ ಸಾಧನ‌‌ ಬಳಸಿ ಪರೀಕ್ಷೆ ಬರೆಯುತ್ತಿದ್ದುದು ಖಚಿತವಾಗಿದೆ. ಅವರನ್ನು ಬಂಧಿಸಲಾಗಿದೆ.

ಮಾಳಮಾರುತಿ, ಕ್ಯಾಂಪ್ ಹಾಗೂ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಹಾಗೂ ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT