ಶನಿವಾರ, ಜುಲೈ 31, 2021
27 °C

ಹೊಸ ಆಶೋತ್ತರಗಳೊಂದಿಗೆ ಬದುಕಿ: ಬಿಂಬಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಗಳೆರಡನ್ನೂ ಸ್ಪರ್ಧಾತ್ಮಕ ಮನೋಭಾವದಿಂದ ನೋಡಬೇಕು. ಹೊಸ ಆಶೋತ್ತರಗಳೊಂದಿಗೆ ಬದುಕಬೇಕು’ ಎಂದು ಎಸ್‌ಕೆಇ ಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಬಿಂಬಾ ನಾಡಕರ್ಣಿ ಸಲಹೆ ನೀಡಿದರು.

ಇಲ್ಲಿನ ಎಸ್‌ಕೆಇ ಸಂಸ್ಥೆಯ ಆರ್‌ಪಿಡಿ ಕಾಲೇಜಿನಲ್ಲಿ ನಡೆದ ವಾರ್ಷಿಕ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಹುಮಾನ: ಸಂಜನಾ ಪೋವಾರ ಜನರಲ್ ಪ್ರೋಫಿಶಿಯೆನ್ಸಿ ಪ್ರಶಸ್ತಿ‌ ಪಡೆದರು. ಪ್ರಥಮೇಶ ಪಾಟೀಲ, ರೋಹನ ಬಸಲಿಂಗೋಳ, ವಾಣಿ ಚಿನ್ನಪ್ಪಗೌಡರ ಹಾಗೂ ಐಶ್ವರ್ಯಾ ಹೊಸೂರ ‘ವರ್ಷದ ವಿದ್ಯಾರ್ಥಿ’ ಪ್ರಶಸ್ತಿ‌ ತಮ್ಮದಾಗಿಸಿಕೊಂಡರು. ಕಿರಣ ತಾರಳೆಕರ ಹಾಗೂ ಪೂಜಾ ದಳವಿ ಉತ್ತಮ ಕ್ರೀಡಾಪಟು ಪ್ರಶಸ್ತಿ ಗಳಿಸಿದರು.

ಮನೋಜ ಹೆಗಡೆ ‘ಬೆಸ್ಟ್‌ ಫಿಜಿಕ್‌’, ಐಶ್ವರ್ಯಾ ಕರಿಗಾರ ‘ಉತ್ತಮ ಕ್ರೀಡಾ ಸಾಧಕಿ’, ನಾಗರಾಜ ಜಟ್ಟೆನ್ನವರ ಸ್ಕೌಟ್ಸ್ ಗೈಡ್ಸ್‌ ಪ್ರಶಸ್ತಿ, ನೇಹಾ ಸಾವಂತ ‘ಅತ್ಯುತ್ತಮ ನಾಯಕಿ’, ಫಾಲ್ಗುಣಿ ಗೆಂಜಿ ‘ಉತ್ತಮ ರೆಡ್ ಕ್ರಾಸ್‌ ಸ್ವಯಂಸೇವಕಿ’, ಚೇತನ ಕುಮಾರ ಡಬ್ಬಾಗೊಳ ‘ಉತ್ತಮ ಎನ್ಎಸ್ಎಸ್ ಸ್ವಯಂಸೇವಕ’, ಪ್ರಥಮೇಶ ಪಾಟೀಲ ‘ಉತ್ತಮ ಎನ್‌ಸಿಸಿ ಸ್ವಯಂಸೇವಕ’ ಪ್ರಶಸ್ತಿ ಪಡೆದರು.

ಬಿಬಿಎ ವಿಭಾಗದಲ್ಲಿ ಸಾಕ್ಷಿ ರಾಜಪೂತ ಆರ್‌ಸಿಯುಗೆ 10ನೇ ಸ್ಥಾನ ಪಡೆದರು. ಆಕಾಶ ನಾವಿ ಉತ್ತಮ ಯೋಜನೆಗಾಗಿ ಪ್ರಶಸ್ತಿ ಸ್ವೀಕರಿಸಿದರು. ಶ್ರೇಯಸ್ ಬೆಟಗೇರಿ ಹಾಗೂ ದೀಪಿಕಾ ಸತ್ತೇಣ್ಣವರ ‘ಉತ್ತಮ‌ ವಿದ್ಯಾರ್ಥಿಗಳು’ ಎನಿಸಿದರು. ಟೀಮ್ ಮುಂಬೈ ಸಮಗ್ರ ವೀರಾಗ್ರಣಿ ಪ್ರಶಸ್ತಿ ಗೆದ್ದಿತು. ಟೀಮ್ ಪಣಜಿ ದ್ವಿತೀಯ ಸ್ಥಾನ ಗಳಿಸಿತು.

ಆರ್‌ಪಿಡಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶರದ ವಾಲಾವಾಲಕರ್ ಪಾಲ್ಗೊಂಡಿದ್ದರು.

ಜಿಮ್ಖಾನಾ ಸಮಿತಿ ಉಪಾಧ್ಯಕ್ಷ ಪ್ರೊ.ಸಿ.ಎಂ. ಮುನ್ನೋಳಿ ಸ್ವಾಗತಿಸಿದರು. ಪ್ರಾಚಾರ್ಯೆ ಡಾ.ಅಚಲಾ ದೇಸಾಯಿ ಪ್ರಾಸ್ತಾವಿಕ ಮಾತನಾಡಿದರು. ಬಹುಮಾನ ವಿತರಣಾ ಸಮಾರಂಭವನ್ನು ಪ್ರೊ.ಎಸ್.ಎಸ್. ಶಿಮ್ಮನಗೌಡರ ನಡೆಸಿಕೊಟ್ಟರು. ಪ್ರೊ.ಪೂಜಾ ಪಾಟೀಲ ಹಾಗೂ ಪ್ರೊ.ಶಿಮ್ಮನಗೌಡರ ನಿರೂಪಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಎಸ್. ಶಿಂಧೆ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು