ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲವಳ್ಳಿ ರೈತರಿಗೆ ಜಾಮೀನು

Published 17 ಡಿಸೆಂಬರ್ 2023, 16:00 IST
Last Updated 17 ಡಿಸೆಂಬರ್ 2023, 16:00 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಕುಲವಳ್ಳಿ ಗುಡ್ಡದ ಒಂಬತ್ತು ಹಳ್ಳಿಗಳ ಜಮೀನುಗಳಲ್ಲಿ ಸಾಗುವಳಿ ಮಾಡುತ್ತ ಬಂದಿರುವ ರೈತರ ಬೇಡಿಕೆಗಳಿಗೆ ಆಗ್ರಹಿಸಿ ಈಚೆಗೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ 12 ರೈತರಿಗೆ ಇಲ್ಲಿಯ ಕಿರಿಯ ದಿವಾಣಿ ಮತ್ತು ಸತ್ರ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.

ಹಬೀಬ ಶಿಲೇದಾರ, ಬಿಷ್ಟಪ್ಪ ಶಿಂದೆ, ಅರ್ಜನ್ ಮಡಿವಾಳರ, ನಾಗಪ್ಪ ಅಸಲನ್ನವರ, ಮಹಾಂತಯ್ಯ ವಕ್ಕುಂದಮಠ, ನತ್ತು ಪಾರೀಸ್, ಕಾಸೀಂಸಾಬ ನೇಸರಗಿ, ಮಹಾಂತೇಶ ಎಮ್ಮಿ, ಗಿರಿಮಲ್ಲಯ್ಯ ನಾಯ್ಕರ್, ಸಲೀಂ ಮೊಕಾಶಿ, ರಾಜೀವ ದೊಡ್ಡನಾಯ್ಕರ್, ಪಿ. ಕೆ. ನೀರಲಕಟ್ಟಿ ಅವರ ಮೇಲೆ ಕಿತ್ತೂರು ಪೊಲೀಸರು ವಿವಿಧ ಕಲಂ ಅಡಿ ಪ್ರಕರಣ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT