ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಸಂಭ್ರಮದ ಬಕ್ರೀದ್ ಆಚರಣೆ

Published 17 ಜೂನ್ 2024, 4:47 IST
Last Updated 17 ಜೂನ್ 2024, 4:47 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಮುಸ್ಲಿಮರು ಶ್ರದ್ಧೆಯಿಂದ 'ಬಕ್ರೀದ್' ಆಚರಿಸಿದರು.

ಹೊಸ ಬಟ್ಟೆಗಳನ್ನು ಧರಿಸಿ ಆಗಮಿಸಿದ ಮುಸ್ಲಿಮರು, ಇಲ್ಲಿನ ನ್ಯಾಯಾಲಯ ಆವರಣದ ಬಳಿಯ ಈದ್ಗಾ ಮೈದಾನ, ಕೋಟೆ ಆವರಣದಲ್ಲಿನ ಹಳೆಯ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದಲ್ಲದೆ, ಆಯಾ ತಾಲ್ಲೂಕು, ಹೋಬಳಿ ಹಾಗೂ ಗ್ರಾಮಗಳಲ್ಲಿನ ಈದ್ಗಾ ಮೈದಾನಗಳು ಮತ್ತು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು.

ಹಬ್ಬದ ಪ್ರಯುಕ್ತ ಕುರ್ಬಾನಿ (ಪ್ರಾಣಿಬಲಿ) ನೀಡಲು ಮುಸ್ಲಿಮರು ಸಿದ್ಧತೆ ಮಾಡಿಕೊಂಡಿದ್ದರು.‌ ನಮಾಜ್ ಮುಗಿದ ನಂತರ ಸಂಪ್ರದಾಯದಂತೆ ಕುರ್ಬಾನಿ ನೀಡಿದರು.

ನಗರದ ಪೊಲೀಸ್ ಕೇಂದ್ರಸ್ಥಾನದ ಮೊಹಮ್ಮದೀಯಾ ಮಸೀದಯಲ್ಲಿ ಇಸ್ಲಾಂ ಧರ್ಮಗುರು ಖಾರಿ ಜಾಕೀರ್ ಹುಸೇನ್ ಆರೀಫ್‌ ಖಾನ್ ಅವರು, ಹಬ್ಬದ ಸಂದೇಶ ಸಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT