ಬೆಳಗಾವಿ: ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ರಾಮನ ಭಕ್ತರ ಕೈಮೇಲೆ ಟ್ಯಾಟೂ ಹಾಕಿಸುವ ಅಭಿಯಾನಕ್ಕೆ ಸೋಮವಾರ ಚಾಲನೆ ಸಿಕ್ಕಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಭಯ ಪಾಟೀಲ, ‘ಟ್ಯಾಟೂ ಹಾಕಿಸುವ ಅಭಿಯಾನ ಕೈಗೊಳ್ಳುತ್ತಿರುವುದು ಇದೇ ಮೊದಲು. ಆಸಕ್ತರು ತಮ್ಮ ಕೈಮೇಲೆ ರಾಮನ ಚಿತ್ರ ಮತ್ತು ತಮಗಿಷ್ಟವಾದ ಭಾಷೆಗಳಲ್ಲಿ ರಾಮನಿಗೆ ಸಂಬಂಧಿಸಿದ ಘೋಷಣೆ ಬರೆಯಿಸಿಕೊಳ್ಳುತ್ತಿದ್ದಾರೆ. 3 ಸಾವಿರಕ್ಕೂ ಅಧಿಕ ಜನರು ನೋಂದಾಯಿಸಿಕೊಂಡಿದ್ದಾರೆ’ ಎಂದರು.

‘ಜ.21ರವರೆಗೆ 10 ಸಾವಿರ ಜನರಿಗೆ ಟ್ಯಾಟೂ ಹಾಕಿಸುವ ಗುರಿ ಹೊಂದಿದ್ದೇವೆ. ಶಿವಾಜಿ ಉದ್ಯಾನ, ಆರ್‌ಪಿಡಿ-ಗೋಗಟೆ ಕಾಲೇಜುಗಳ ಬಳಿ ಮತ್ತು ಅನಗೋಳದ ಹರಿ ಮಂದಿರದಲ್ಲಿ ಬುಧವಾರದಿಂದ ಕಲಾವಿದರು ಲಭ್ಯವಿರಲಿದ್ದು, ಮಹಿಳೆಯರ ಕೈಮೇಲೆ ಟ್ಯಾಟೂ ಹಾಕಲು ಪ್ರತ್ಯೇಕವಾಗಿ ಮಹಿಳಾ ಕಲಾವಿದರು ಇರಲಿದ್ದಾರೆ’ ಎಂದರು.
.ರಾಮ ಮಂದಿರ: ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ರಾಮ ಲಲ್ಲಾ ಮೂರ್ತಿಯೇ ಅಂತಿಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.