ಮಂಗಳವಾರ, ಜೂನ್ 22, 2021
27 °C

ಬೆಳಗಾವಿಗೆ ಆಮ್ಲಜನಕ ತರುತ್ತಿದ್ದ ಟ್ಯಾಂಕರ್ ಅಪಘಾತ: ಸೋರಿಕೆಯಾಗಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಬಳ್ಳಾರಿಯಿಂದ ಇಲ್ಲಿಗೆ ಬರುತ್ತಿದ್ದ ಆಮ್ಲಜನಕ ಟ್ಯಾಂಕರ್ ತಾಲ್ಲೂಕಿನ ಮುತ್ನಾಳ ಗ್ರಾಮದ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಅಪಘಾತಕ್ಕೀಡಾಗಿದೆ. ಸೋರಿಕೆ ಸಂಭವಿಸಿಲ್ಲ.

ಬಳ್ಳಾರಿಯ ಜೆಎಸ್ ಡಬ್ಲ್ಯು ಘಟಕದಿಂದ ಬರುತ್ತಿದ್ದ ಟ್ಯಾಂಕರ್ ಮುಂದಿದ್ದ ಟ್ರಕ್ ಗೆ ಗುದ್ದಿದೆ. ಪ್ರಾಣ ಹಾನಿ ಸಂಭವಿಸಿಲ್ಲ.

ಸ್ಥಳಕ್ಕೆ ಹಿರೇಬಾಗೇವಾಡಿ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಆ ಟ್ಯಾಂಕರ್ ಚಲಿಸುವ ಸ್ಥಿತಿಯಲ್ಲಿಲ್ಲ. ಬೇರೊಂದು ಟ್ಯಾಂಕರ್ ಗೆ ವರ್ಗಾಯಿಸಿ ಬೆಳಗಾವಿಗೆ ಸಾಗಿಸಲು ನಿರ್ಧರಿಸಲಾಗಿದೆ. 

ಬೆಳಗಾವಿಗೆ ತೆರಳುವ ವಾಹನಗಳು ಸರ್ವಿಸ್ ರಸ್ತೆ ಮೂಲಕ ಸಾಗುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು