ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ | ಕಣ್ಮನ ಸೆಳೆಯುವ ತೋಟದ ಶಾಲೆ

ಚಂದ್ರಶೇಖರ ಎಸ್. ಚಿನಕೇಕರ
Published 10 ಮಾರ್ಚ್ 2024, 4:41 IST
Last Updated 10 ಮಾರ್ಚ್ 2024, 4:41 IST
ಅಕ್ಷರ ಗಾತ್ರ

ಚಿಕ್ಕೋಡಿ: ಎಲ್ಲೆಡೆ ಹೂವಿನ ಗಿಡ, ಕೈ ತೋಟ, ಹೊಂಗೆ, ಮಾವಿನ ಮರಗಳಿಂದ ಕಂಗೊಳಿಸುತ್ತಿರುವ ಸರ್ಕಾರಿ ಶಾಲೆ ಆವರಣ. ವಿವಿಧ ಬಣ್ಣಗಳಿಂದ ಮೂಡಿದ ಗೋಡೆಗಳ ಮೇಲೆ ತೆಗೆದ ಚಿತ್ತಾರ, ಆಧುನಿಕ ಕಲಿಕೋಪಕರಣ ಬಳಸಿ ಪಾಠ ಮಾಡುವ ಶಿಕ್ಷಕರು...

ಇದು ಚಿಕ್ಕೋಡಿ ತಾಲ್ಲೂಕಿನ ಕುಂಗಟೋಳಿ ಗ್ರಾಮದಿಂದ 2 ಕಿ.ಮೀ ದೂರದ ಹೊನ್ನಗುಡ್ಡ ಲಕ್ಷ್ಮಿ ತೋಟದ ವಸತಿ ಪ್ರದೇಶದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ಚಿತ್ರಣ.

ಮೊದಲು ಕುಂಗಟೋಳಿ ಗ್ರಾಮದ ತೋಟದ ವಸತಿ ಪ್ರದೇಶದ ಮಕ್ಕಳಿಗೆ ಶಿಕ್ಷಣ ಗಗನ ಕುಸುಮವಾಗಿತ್ತು. 2–3 ಕಿ.ಮೀ ದೂರ ನಡೆದುಕೊಂಡು ಹೋಗಲಾಗದೇ ಶಾಲೆಗೆ ಗೈರಾಗುತ್ತಿದ್ದರು. ಕೆಲವೊಂದು ಮಕ್ಕಳು ಹೊಲ ಗದ್ದೆಯಲ್ಲಿ ಕೆಲಸಗಳಿಗೆ ತಂದೆ ತಾಯಿಗೆ ನೆರವಾಗುತ್ತಿದ್ದರು. ದನ, ಕುರಿ ಮೇಯಿಸುತ್ತಿದ್ದರು. ತೋಟದ ಶಾಲೆ ತೆರೆದರೆ ಹೇಗೆ ಅಂತಾ ಸ್ಥಳೀಯರು ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡರು. ಇಲಾಖೆ 1996ರಲ್ಲಿ ಶಾಲೆಯೊಂದನ್ನು ತೆರೆಯಲಾಯಿತು. ಪುಟ್ಟ ಗುಡಿಸಲಿನಲ್ಲಿ ಪ್ರಾರಂಭವಾದ ಶಾಲೆಯಲ್ಲಿ ಓರ್ವ ಶಿಕ್ಷಕ 8-10 ಮಕ್ಕಳಿಗೆ ಪಾಠ ಮಾಡಬೇಕಿತ್ತು.

ಗ್ರಾಮದ ಸಚಿಗೌಡ ಬ್ಯಾಳಿ, ಶಿವರಾಯ ಕಮತೆ ಎಂಬುವವರು 10 ಗುಂಟೆ ಜಾಗ ಶಾಲೆಗೆ ದಾನ ನೀಡಿದರು. 1-5 ನೇ ತರಗತಿಯವರೆಗೆ ಇರುವ ಈ ಶಾಲೆಯಲ್ಲಿ ಇದೀಗ 44 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರಿದ್ದಾರೆ.

2022ರಲ್ಲಿ ಕುಂಗಟೋಳಿ ಗ್ರಾ.ಪಂ ನರೇಗಾ ಅಡಿಯಲ್ಲಿ ಭೋಜನಾಲಯ, ನೆಲಹಾಸು (ಪೇವರ್ಸ್), ಶೌಚಾಲಯ, ಆವರಣ ಗೋಡೆ ನಿರ್ಮಿಸಲಾಯಿತು. ಸ್ಥಳೀಯ ಶಾಸಕ ದುರ್ಯೋಧನ ಐಹೊಳೆ ಪ್ರಯತ್ನದಿಂದ 2019-20 ರಲ್ಲಿ ₹11 ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಒಂದು ಕೊಠಡಿ ನಿರ್ಮಿಸಲಾಯಿತು. ಬಾಲಕ - ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಸಾಮಾಜಿಕ ಜಾಲತಾಣ ಬಳಸಿ ದಾನಿಗಳನ್ನು ಸಂಪರ್ಕಿಸಿ ₹50 ಸಾವಿರ ವೆಚ್ಚದಲ್ಲಿ ಶಿವಮೊಗ್ಗ, ದಾವಣಗೆರೆ ಮೂಲದ ಹನುಮಂತಪ್ಪ ಬಿ.ಎಂ., ನಾಗರಾಜ ಎಚ್.ಪಿ., ಗಣೇಶಮಯ್ಯ ಬಂಟ್ವಾಳ, ಗೌತಮ ಬಿ.ಎಲ್., ಡಾ.ಆರ್. ಮಾಲ್ತೇಶ, ರವಿ ನಿಲೋಗಲ್ಲ ಸಹಾಯದಿಂದ ಸುಸಜ್ಜಿತ ಗ್ರಂಥಾಲಯ ನಿರ್ಮಿಸಲಾಗಿದೆ.

ಕಬ್ಬೂರ ಮೂಲದ ಉದ್ಯಮಿ ಮಹೇಶ ಬೆಲ್ಲದ ₹1.5 ಲಕ್ಷ ವೆಚ್ಚದಲ್ಲಿ ಪೆನಲ್ ಬೋರ್ಡ್ ಟಿವಿ ದೇಣಿಗೆ ನೀಡಿದರು. ಕೋಲಾರ ಮೂಲದ ಎಂ.ಕೆ. ವೆಂಕಟರಮಣ ಹಾಗೂ ದುಬೈನಲ್ಲಿ ನೆಲೆ ನಿಂತ ಶಾಲೆಯ ಹಳೆಯ ವಿದ್ಯಾರ್ಥಿ ಮಲಗೌಡ ಬ್ಯಾಳಿ ಅವರು ರೌಂಡ್ ಟೇಬಲ್, ಕುರ್ಚಿಗಳನ್ನು ನೀಡಿದ್ದಾರೆ. ಎಸ್‌ಡಿಎಂಸಿ ಹಾಗೂ ಸ್ಥಳೀಯ ದಾನಿಗಳು ₹45 ಸಾವಿದರಲ್ಲಿ ಶಾಲಾ ಗೋಡೆಗಳಿಗೆ ಬಣ್ಣ ಹಾಗೂ ಗೋಡೆ ಬರಹ ಬರೆದಿದ್ದಾರೆ. ₹25 ಸಾವಿರ ವೆಚ್ಚದಲ್ಲಿ ರಾಷ್ಟ್ರೀಯ ನಾಯಕರ ಭಾವಚಿತ್ರ ಹಾಗೂ ಕಲಿಕಾ ಚಾರ್ಟ್ ದೇಣಿಗೆಯಾಗಿ ಶಿಕ್ಷಕ ಹನುಮಂತಪ್ಪ ಅವರ ಸ್ನೇಹಿತರು ನೀಡಿದ್ದಾರೆ.: ಎಲ್ಲೆಡೆ ಹೂವಿನ ಗಿಡ, ಕೈ ತೋಟ, ಹೊಂಗೆ, ಮಾವಿನ ಮರಗಳಿಂದ ಕಂಗೊಳಿಸುತ್ತಿರುವ ಸರ್ಕಾರಿ ಶಾಲೆ ಆವರಣ. ವಿವಿಧ ಬಣ್ಣಗಳಿಂದ ಮೂಡಿದ ಗೋಡೆಗಳ ಮೇಲೆ ತೆಗೆದ ಚಿತ್ತಾರ, ಆಧುನಿಕ ಕಲಿಕೋಪಕರಣ ಬಳಸಿ ಪಾಠ ಮಾಡುವ ಶಿಕ್ಷಕರು...

ಕಬ್ಬೂರ ಮೂಲದ ಉದ್ಯಮಿ ಮಹೇಶ ಬೆಲ್ಲದ ₹1.5 ಲಕ್ಷ ವೆಚ್ಚದಲ್ಲಿ ಪೆನಲ್ ಬೋರ್ಡ್ ಟಿವಿ ದೇಣಿಗೆ ನೀಡಿದರು. ಕೋಲಾರ ಮೂಲದ ಎಂ.ಕೆ. ವೆಂಕಟರಮಣ ಹಾಗೂ ದುಬೈನಲ್ಲಿ ನೆಲೆ ನಿಂತ ಶಾಲೆಯ ಹಳೆಯ ವಿದ್ಯಾರ್ಥಿ ಮಲಗೌಡ ಬ್ಯಾಳಿ ಅವರು ರೌಂಡ್ ಟೇಬಲ್, ಕುರ್ಚಿಗಳನ್ನು ನೀಡಿದ್ದಾರೆ. ಎಸ್‌ಡಿಎಂಸಿ ಹಾಗೂ ಸ್ಥಳೀಯ ದಾನಿಗಳು ₹45 ಸಾವಿದರಲ್ಲಿ ಶಾಲಾ ಗೋಡೆಗಳಿಗೆ ಬಣ್ಣ ಹಾಗೂ ಗೋಡೆ ಬರಹ ಬರೆದಿದ್ದಾರೆ. ₹25 ಸಾವಿರ ವೆಚ್ಚದಲ್ಲಿ ರಾಷ್ಟ್ರೀಯ ನಾಯಕರ ಭಾವಚಿತ್ರ ಹಾಗೂ ಕಲಿಕಾ ಚಾರ್ಟ್ ದೇಣಿಗೆಯಾಗಿ ಶಿಕ್ಷಕ ಹನುಮಂತಪ್ಪ ಅವರ ಸ್ನೇಹಿತರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT