ಸೋಮವಾರ, ಆಗಸ್ಟ್ 19, 2019
28 °C
ಬೆಳಗಾವಿ

ಮೈತುಂಬಿ ಹರಿಯುತ್ತಿದೆ ಮಾರ್ಕಂಡೇಯ ನದಿ; ಮಠದಲ್ಲಿ ಸಿಲುಕಿದ್ದ 15 ಜನರ ರಕ್ಷಣೆ

Published:
Updated:

ಬೆಳಗಾವಿ: ಮಾರ್ಕಂಡೇಯ ನದಿ ಅಬ್ಬರಕ್ಕೆ ಗೋಕಾಕ ತಾಲ್ಲೂಕು ಕುಂದರಗಿಯ ಸುಪ್ರಸಿದ್ಧ ಕುಂದರಗಿ ಅಡವಿಸಿದ್ದೇಶ್ವರ ಮಠ ಜಲಾವೃತವಾಗಿದೆ.

ಗೋಕಾಕ ತಾಲ್ಲೂಕು ಆಡಳಿತ ಪ್ರವಾಹ ಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದು, ಮಠದಲ್ಲಿದ್ದ 15 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ತಂದಿದೆ. 

ವಿಪತ್ತು ನಿರ್ವಹಣಾ ತಂಡವು ಬೋಟ್ ಮೂಲಕ ತೆರಳಿ ಮಠದಲ್ಲಿದ್ದ ಸಿಬ್ಬಂದಿ ಹಾಗೂ ಅರ್ಚಕರನ್ನು ಸುರಕ್ಷಿತ ಪ್ರದೇಶಕ್ಕೆ ಕರೆ ತಂದಿತು. ವಾರದಿಂದ ಬೆಳಗಾವಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಾರ್ಕಂಡೇಯ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 

ಲೋಂಡಾ–ಗೋವಾ ರೈಲು ಸ್ಥಗಿತ

ಖಾನಾಪುರ ತಾಲ್ಲೂಕಿನಲ್ಲೂ ಭಾರಿ ಮಳೆಯಾಗಿದ್ದು, ಲೋಂಡಾ ಸಮೀಪದಲ್ಲಿ ರೈಲು ಹಳಿ ಕೆಳಗಿನ ಮಣ್ಣಿ ಕುಸಿದು ರೈಲು ಸಂಚಾರ ಸ್ಥಗಿತಗೊಂಡಿದೆ. ಲೋಂಡಾ–ಗೋವಾ ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದೆ. 

Post Comments (+)