ಕೌಜಲಗಿ (ಬೆಳಗಾವಿ ಜಿಲ್ಲೆ): ಪಟ್ಟಣದ ಕಟ್ಟಿ ಬಸವೇಶ್ವರ ದೇವಸ್ಥಾನದ ಹತ್ತಿರವಿರುವ ಮನೆಯೊಂದರಲ್ಲಿ ಶುಕ್ರವಾರ ರಾತ್ರಿ 24 ತೊಲಿಯ ಚಿನ್ನಾಭರಣ ಕಳವು ಮಾಡಲಾಗಿದೆ. ಕಳ್ಳರನ್ನು ಹಿಡಿಯಲು ಯತ್ನಿಸಿದ ಮನೆಯ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ.

ಪಾರ್ವತಿ ತಮ್ಮನಪ್ಪ ಹಳ್ಳೂರ ಎಂಬುವರ ಮನೆಯ ಮೊದಲ ಮಹಡಿಯ ಬಾಗಿಲ ಮೂಲಕ ಮಧ್ಯರಾತ್ರಿ 1.30ರ ಸುಮಾರಿಗೆ ಮೂವರು ಕಳ್ಳರು ನುಗ್ಗಿದರು. ಬೀರುದಲ್ಲಿದ್ದ ಚಿನ್ನಾಭರಣಗಳನ್ನು ಕದ್ದರು. ಇನ್ನೇನು ಪರಾರಿ ಆಗಬೇಕು ಎನ್ನುವಷ್ಟರಲ್ಲಿ ಅಲ್ಲಿಯೇ ಮಲಗಿದ್ದ ಲೋಕೇಶ ಬಸಪ್ಪ ದಳವಾಯಿ ಅವರಿಗೆ ಎಚ್ಚರವಾಯಿಯು. ಯುವಕ ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದಾಗ, ಯುವಕನ ಬಲಗೈಗೆ ಚಾಕುವಿನಿಂದ ಇರಿದು ತಪ್ಪಿಸಿಕೊಂಡರೆಂದು ಯುವಕ ಹೇಳಿದ್ದಾರೆ.

ಸುತ್ತಮುತ್ತಲ ಪ್ರದೇಶವನ್ನು ಬೆಳಗಾವಿ ಶ್ವಾನ ದಳದಿಂದ ಪರಿಶೀಲಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಸ್ಥಳಕ್ಕೆ ಭೇಟಿ ನೀಡಿದರು. ಗೋಕಾಕ ಡಿವೈಎಸ್ಪಿ ರಾಜು ನಾಯಿಕ ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ, ಕುಲಗೋಡ ಪಿಎಸ್ಐ ಆನಂದ ಕೂಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.