‘ಕನ್ನಡ ಕೋಗಿಲೆ’ಯಲ್ಲಿ ಶ್ರವಣಕುಮಾರ; ಭಜನೆಯಿಂದ ರಿಯಾಲಿಟಿ ಶೋಗೆ ಲಗ್ಗೆ

ಸೋಮವಾರ, ಜೂನ್ 24, 2019
26 °C
ರಾಮದುರ್ಗದ ಪ್ರತಿಭೆ

‘ಕನ್ನಡ ಕೋಗಿಲೆ’ಯಲ್ಲಿ ಶ್ರವಣಕುಮಾರ; ಭಜನೆಯಿಂದ ರಿಯಾಲಿಟಿ ಶೋಗೆ ಲಗ್ಗೆ

Published:
Updated:
Prajavani

ಬೆಳಗಾವಿ: ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಮೂಡಿಬರುತ್ತಿರುವ ‘ಕನ್ನಡ ಕೋಗಿಲೆ’ ಆವೃತ್ತಿ–2ರಲ್ಲಿ ಜಿಲ್ಲೆಯ ರಾಮದುರ್ಗ ಪಟ್ಟಣದ ಶ್ರವಣಕುಮಾರ ಮುದ್ದಿ ತನ್ನ ಕಂಚಿನ ಕಂಠದ ಮೂಲಕ ರಾಜ್ಯದಾದ್ಯಂತ ಸಂಗೀತಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮೆಗಾ ಆಡಿಷನ್‌ನಲ್ಲಿ ಇಷ್ಟದ ದೇವರು ಆಂಜನೇಯನನ್ನು ನೆನೆದು ಹಾಡಿದ ಭಜರಂಗಿ ಚಿತ್ರದ ‘ರೇ ರೇ ರೇ ರೆ ರೇ ರೆ ರೇ ರೆ ಭಜರಂಗಿ’ ಹಾಡಿನ ಮೂಲಕ ಇವರು ಕಾರ್ಯಕ್ರಮಕ್ಕೆ ಆಯ್ಕೆಯಾಗುವ ಜೊತೆಗೆ ಮೊದಲ ಹಾಡಿನಿಂದಲೇ ಪ್ರೇಕ್ಷಕರ ಹೃದಯ ಗೆದ್ದರು.

ಕಾರ್ಯಕ್ರಮದೂದ್ದಕ್ಕೂ ಅವರು ಪ್ರಸ್ತುತಪಡಿಸುತ್ತಿರುವ ಚಲನಚಿತ್ರ ಗೀತೆಗಳು ನಿರ್ಣಾಯಕರ ಮನಗೆದ್ದಿವೆ. ಜೋಡಿಹಕ್ಕಿ ಚಿತ್ರದ ‘ಲಾಲಿ ಸುವ್ವಾಲಿ’, ಡ್ಯಾನ್ಸ್‌ ರಾಜಾ ಡ್ಯಾನ್ಸ್‌ ಚಿತ್ರದ ‘ಅಮ್ಮಾ ಅಮ್ಮಾ ನಿನ್ನಾ ತ್ಯಾಗಕೆ’, ಕೃಷ್ಣನ್‌ ಲವ್‌ ಸ್ಟೋರಿ ಚಿತ್ರದ ‘ಮೋಸ ಮಾಡಲೆಂದೆ ನೀನು ಬಂದೆಯಾ’ ಸೇರಿ ಇನ್ನಿತರ ಗೀತೆಗಳಿಂದಾಗಿ ಮನ ಗೆದ್ದಿದ್ದಾರೆ. ಬೆಳಗಾವಿ ಜಿಲ್ಲೆಯ ಹೆಸರನ್ನೂ ಬೆಳಗಿಸಿದ್ದಾರೆ.

ಭಜನೆ ಹಾಡುತ್ತಿದ್ದವರು:

ಅವರ ತಂದೆ ಕುಬೇರಪ್ಪ ತಬಲಾ ವಾದಕರಾಗಿದ್ದು, ಗಾಯಕರೂ ಹೌದು. ಅವರು ದೇವಸ್ಥಾನ ಹಾಗೂ ವಿಶೇಷ ಕಾರ್ಯಮಗಳಿಗೆ ಭಜನೆ ಮಾಡಲು ತೆರಳುತ್ತಿದ್ದಾಗ ಮಗನನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಇದರಿಂದ ಶ್ರವಣ ಅವರಿಗೂ ಸಂಗೀತದಲ್ಲಿ ಆಸಕ್ತಿ ಮೂಡಿತು. ಆದರೆ, ಅವರು ಸಂಗೀತ ತರಬೇತಿ ಪಡೆದಿಲ್ಲ. ಹವ್ಯಾಸಕ್ಕಾಗಿ ಹಾಡುತ್ತಲೇ ಉತ್ತಮ ಗಾಯಕರಾಗಿ ಹೊರಹೊಮ್ಮಿದ್ದಾರೆ.

ಜಿಲ್ಲೆ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಆಯೋಜಿಸುತ್ತಿದ್ದ ಜಾತ್ರೆ, ಉತ್ಸವ ಹಾಗೂ ಇನ್ನಿತರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿ ಹಾಡುತ್ತಿದ್ದರು; ಮೆಚ್ಚುಗೆ ಗಳಿಸುತ್ತಿದ್ದರು. ಇದು ಅವರಿಗೆ ಪ್ರೇರಣೆ ನೀಡುತ್ತಿತ್ತಂತೆ.

ಬಡತನದಲ್ಲಿ ಅರಳಿದ ಪ್ರತಿಭೆ:

1995ರ ಅ. 22ರಂದು ಜನಿಸಿದ ಅವರು, ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಲೇ ಬೆಳೆದಿದ್ದಾರೆ. ಬಿ.ಕಾಂ. ಪೂರೈಸಿದ ನಂತರ ಮುಂದಿನ ಶಿಕ್ಷಣಕ್ಕೆ ಆರ್ಥಿಕ ಸಮಸ್ಯೆ ಉಂಟಾಗಿ, ಹುಬ್ಬಳ್ಳಿಯಲ್ಲಿನ ಖಾಸಗಿ ಸಂಸ್ಥೆಯಲ್ಲಿ ಕೆಲವು ತಿಂಗಳು ಕಾರ್ಯನಿರ್ವಹಿಸಿದ್ದರು. ಉನ್ನತ ಶಿಕ್ಷಣ ಪಡೆಯಬೇಕೆಂಬ ಆಶಯ ಹೊಂದಿದ್ದಾರೆ. ಅವರ ತಂದೆ ನೇಕಾರಿಕೆ ಮಾಡುತ್ತಾರೆ. ಶ್ರವಣ ಕೂಡ ಚಿಕ್ಕ ವಯಸ್ಸಿನಿಂದಲೂ ತಂದೆಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. 

ಸೀರೆ ಉಡುಗೊರೆ:

ಅವರು ನೇಕಾರಿಕೆ ಮಾಡುತ್ತಾರೆ ಎಂಬ ವಿಷಯ ತಿಳಿದ ನಿರ್ಣಾಯಕರಲ್ಲಿ ಒಬ್ಬರಾದ ಬಿಗ್‌ಬಾಸ್ ಖ್ಯಾತಿಯ ಚಂದನ್‌ ಶೆಟ್ಟಿ ಅವರು ತಮ್ಮ ತಾಯಿಗೆ ಎರಡು ಸೀರೆ ತಂದು ಕೊಡುವಂತೆ ಕೋರಿಕೆ ಇಟ್ಟಿದ್ದರು. ಮುಂದಿನ ಎಪಿಸೋಡ್‌ನಲ್ಲೇ ಶ್ರವಣಕುಮಾರ ತಾನೇ ಸಿದ್ಧಪಡಿಸಿದ ಸೀರೆಯನ್ನು ಉಡುಗೊರೆ ನೀಡಿದರು. ನಂತರ ನಿರ್ಣಾಯಕಿ ಅರ್ಚನಾ ಹಾಗೂ ಮಹಿಳಾ ಸ್ಪರ್ಧಿಗಳು ಸೇರಿ ಒಟ್ಟು 9 ಜನರಿಗೂ ಕೂಡ ಸೀರೆ ಕೊಟ್ಟಿದ್ದರು.

‘ತಾಯಂದಿರ ದಿನದ ವಿಶೇಷ’ ಸಂಚಿಕೆಯಲ್ಲಿ ನಾನೆ ಸಿದ್ಧಪಡಿಸಿದ ಸೀರೆಯನ್ನು ಕನ್ನಡ ಕೋಗಿಲೆ ವೇದಿಕೆಯಲ್ಲೇ ತಾಯಿಗೆ ಉಡುಗೊರೆಯಾಗಿ ಕೊಟ್ಟಿದ್ದೆ. ಇದು ನನಗೆ ಸ್ಮರಣೀಯ ಘಳಿಗೆ’ ಎಂದು ಶ್ರವಣ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !