ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಗೌಂಡವಾಡ: 15 ಮಂದಿ ಬಂಧನ, ಗ್ರಾಮದಲ್ಲಿ 200 ಪೊಲೀಸರ ಬಂದೋಬಸ್ತ್

Last Updated 18 ಜೂನ್ 2022, 21:14 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಗೌಂಡವಾಡ ಗ್ರಾಮದಲ್ಲಿ ‌ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತಡರಾತ್ರಿ 15 ಆರೋಪಿಗಳನ್ನು ಪೊಲೀಸರು ಬಂಧಿಸಿದರು.

ಗ್ರಾಮದ ಬೈರೋನಾಥ ದೇವಸ್ಥಾನಕ್ಕೆ ಸೇರಿದ ಜಮೀನು ಉಳಿಸಲು ಸತೀಶ ಪಾಟೀಲ (37) ಅವರು ಹೋರಾಟ ನಡೆಸಿದ್ದರು. ಶನಿವಾರ ತಡರಾತ್ರಿ ಅವರ ಕೊಲೆಯಾದ ಕಾರಣ ಹಿಂಸಾಚಾರ ಭುಗಿಲೆದ್ದಿತು. ಇದರಲ್ಲಿ ನಾಲ್ಕು ಕಾರು, ಒಂದು ಟ್ರ್ಯಾಕ್ಟರ್, ಎರಡು ಟೆಂಪೊ,ಹುಲ್ಲಿನ ಬಣವೆಗೆ ಬೆಂಕಿ ಹಚ್ಚಲಾಗಿದೆ. ಗ್ರಾಮದ ಹಲವು ಮನೆಗಳ ಮೇಲೆ ಕಲ್ಲು ತೂರಾಟ ಕೂಡ ನಡೆಯಿತು.

ಇದರಿಂದ ಬೆಚ್ಚಿಬಿದ್ದ ಗ್ರಾಮದ ಹಲವು ಜನ ರಾತ್ರಿಯೇ ಊರು ತೊರೆದರು. ಮತ್ತೆ ಕೆಲವರು ಮನೆಗಳಿಗೆ ಒಳಗಿನಿಂದಲೇ ಬೀಗ ಹಾಕಿಕೊಂಡರು.

ಪೊಲೀಸರು ಗಸ್ತು ಬಂದಾಗ ಕೆಲವು ಯುವಕರು ಅವರ ಮೇಲೂ ಹರಿಹಾಯ್ದರು.

'ನಮ್ಮ ಸಮುದಾಯದ ಜಾಗಕ್ಕೆ ಬಂದು ನಮ್ಮನ್ನು ಹೊಡೆದಿದ್ದಾರೆ. ತುಳಿತಕ್ಕೊಳಗಾದ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಪೊಲೀಸರು ಕೂಡ ನಮ್ಮವರನ್ನೇ ಹೊಡೆದು ಹೋಗಿದ್ದಾರೆ. ಬೆಳಿಗ್ಗೆ ಎಲ್ಲರೂ ಕೊಡುತ್ತೇವೆ. ಇವರನ್ನು ನೋಡಿಕೊಳ್ಳುತ್ತೇವೆ' ಎಂದೂ ಯುವಕರ ಗುಂಪೊಂದು ಕೂಗಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT