ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ವಿದ್ಯುತ್ ತಂತಿಯಿಂದ ಹೊಲಕ್ಕೆ ಬೆಂಕಿ– ಉರಿದು ಬೂದಿಯಾದ 30 ಎಕರೆ ಕಬ್ಬು

ಒಟ್ಟು ಕಬ್ಬಿನ ಮೌಲ್ಯ ₹50 ಲಕ್ಷ ಎಂದು ಅಂದಾಜಿಸಲಾಗಿದೆ.
Published 23 ಅಕ್ಟೋಬರ್ 2023, 13:22 IST
Last Updated 23 ಅಕ್ಟೋಬರ್ 2023, 13:22 IST
ಅಕ್ಷರ ಗಾತ್ರ

ಬೆಳಗಾವಿ: ಬೈಲಹೊಂಗಲ ತಾಲೂಕಿನ ಚಿವಟಗುಂಡಿ ಗ್ರಾಮದಲ್ಲಿ ಸೋಮವಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಅಂದಾಜು 30 ಎಕರೆ ಕಬ್ಬು ಸುಟ್ಟಿದೆ.

ಚೆನ್ನಬಸಪ್ಪ ಮಲ್ಲೂರು, ಬಸನಗೌಡ ಸಂಗನಗೌಡ, ಪ್ರಶಾಂತ ಪಾಟೀಲ, ಬಸವರಾಜ ಮಲ್ಲೂರ, ಮಲ್ಲೇಶಪ್ಪ ಬಗನಾಳ, ವೀರನಗೌಡ ಮಲ್ಲೂರ ಸೇರಿ 8 ರೈತರಿಗೆ ಸೇರಿದ ಕಬ್ಬು ಬೆಳೆ ನಾಶವಾಗಿದೆ.

ಒಟ್ಟು ಕಬ್ಬಿನ ಮೌಲ್ಯ ₹50 ಲಕ್ಷ ಎಂದು ಅಂದಾಜಿಸಲಾಗಿದೆ.

ವಿದ್ಯುತ್ ತಂತಿ ಪರಸ್ಪರ ತಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಜಮೀನಿನಲ್ಲಿದ್ದ ನೀರಾವರಿ ಮೋಟಾರು, ಪೈಪುಗಳು, ಕೇಬಲ್, ಕರೆಂಟ್ ಬಾಕ್ಸ್ ಗಳು ಸುಟ್ಟಿವೆ.

ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ವಿದ್ಯುತ್ ತಂತಿ ದುರಸ್ತಿ ಮಾಡದ ಈರಣ ಈ ಅವಘಡ ಸಂಭವಿಸಿದೆ ಎಂದು ರೈತರು ದೂರಿದ್ದಾರೆ.

ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT