ಬೆಳಗಾವಿ: ಈ ಬಾರಿ ಹೋಳಿ ಹುಣ್ಣಿಮೆ ದಿನವೇ(ಮಾ.3) ಚಂದ್ರಗ್ರಹಣವೂ ಇರುವುದರಿಂದ ನಗರದ ವಿವಿಧ ದೇವಸ್ಥಾನಗಳಲ್ಲಿ ಆಚರಣೆಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಪ್ರತಿವರ್ಷ ಹೋಳಿ ಹುಣ್ಣಿಮೆಯಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಪಾಂಗುಳ ಗಲ್ಲಿಯ ಅಶ್ವತ್ಥಾಮ ಮಂದಿರದ ಎದುರು ನೂರಾರು ಜನರು ಉರುಳುಸೇವೆ ಮಾಡಿ ಸಂಭ್ರಮಿಸುತ್ತಿದ್ದರು. ಈ ಸಲ ಬೆಳಿಗ್ಗೆ 8.30ರಿಂದ 10 ಗಂಟೆಯವರೆಗೆ ಉರುಳುಸೇವೆಗೆ ಅವಕಾಶ ಕಲ್ಪಿಸಲಾಗಿದೆ.

ಚವಾಟ್ ಗಲ್ಲಿಯ ದೇವಸ್ಥಾನದ ಮುಂದೆ ಬೆಳಿಗ್ಗೆ 9ಕ್ಕೆ ಕಾಮಣ್ಣ ದಹಿಸಿ, ಪೂಜೆ ಸಲ್ಲಿಸಲಾಗುತ್ತದೆ. ನಂತರ ಸಂಜೆ 7 ಗಂಟೆಯವರೆಗೆ ದೇವಸ್ಥಾನ ಬಂದ್ ಮಾಡಲು ನಿರ್ಧರಿಸಲಾಗಿದೆ.

‘ಭದ್ರತೆಗಾಗಿ 1 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿದ್ದೇವೆ. 250 ಗೃಹರಕ್ಷಕ ದಳ ಸಿಬ್ಬಂದಿ ಬಳಸಿಕೊಳ್ಳುತ್ತಿದ್ದೇವೆ. 7 ಕೆಎಸ್ಆರ್ಪಿ, 10 ಸಿಎಆರ್ ತುಕಡಿಗಳು ಇರಲಿವೆ. ಮದ್ಯ ಸೇವಿಸಿ, ಮಾರಕಾಸ್ತ್ರ ಇರಿಸಿಕೊಂಡು ಓಡಾಡುವರನ್ನು ಪತ್ತೆಹಚ್ಚಲು 19 ಚೆಲ್ಪೋಸ್ಟ್ ತೆರೆದಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.