ಶನಿವಾರ, ಸೆಪ್ಟೆಂಬರ್ 21, 2019
24 °C

ಎಂ.ಚಿದಾನಂದಮೂರ್ತಿ, ಪ್ರೊ.ಜ್ಯೋತಿ ಹೊಸೂರ, ರಾಘವೇಂದ್ರ ಜೋಶಿಗೆ ಪ್ರಶಸ್ತಿ

Published:
Updated:
Prajavani

ಬೆಳಗಾವಿ: ಇಲ್ಲಿನ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ನಿಂದ 2018–19ನೇ ಸಾಲಿನಲ್ಲಿ ಕೊಡಮಾಡುವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ವಿಮರ್ಶೆ-ಸಂಶೋಧನೆ, ಜಾನಪದ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಈ ಬಾರಿ ಪ್ರಶಸ್ತಿ ನೀಡಲು ಟ್ರಸ್ಟ್‌ ತೀರ್ಮಾನಿಸಿದೆ. ಸಂಶೋಧಕ ಎಂ. ಚಿದಾನಂದಮೂರ್ತಿ (ವಿಮರ್ಶಾ-ಸಂಶೋಧನಾ), ರಾಯಬಾಗದ ಪ್ರೊ.ಜ್ಯೋತಿ ಹೊಸೂರ (ಜಾನಪದ) ಹಾಗೂ ರಾಘವೇಂದ್ರ ಜೋಶಿ (ಪತ್ರಿಕೋದ್ಯಮ) ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗಳು ತಲಾ ₹ 50ಸಾವಿರ ನಗದು ಒಳಗೊಂಡಿವೆ.

ಬೆಂಗಳೂರಿನ ಕನ್ನಡ ಭವನದಲ್ಲಿ ಮೇ 25ರಂದು ಸಂಜೆ 5ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಿರಿಯ ಸಾಹಿತಿ ಪ್ರೊ.ಹಂ.ಪ. ನಾಗರಾಜಯ್ಯ ಪ್ರಶಸ್ತಿ ಪ್ರದಾನ ಮಾಡುವರು. ಸಾಹಿತಿ ಸುನಂದಾ ಯಮ್ಮಿ ಅಭಿನಂದನಾಪರ ಭಾಷಣ ಮಾಡುವರು  ಎಂದು ಟ್ರಸ್ಟ್‌ ಅಧ್ಯಕ್ಷ ರಾಘವೇಂದ್ರ ಪಾಟೀಲ ತಿಳಿಸಿದ್ದಾರೆ.

Post Comments (+)