ಬೆಳಗಾವಿ: ‘ಫ್ರೀಡಂ ಆರೋಗ್ಯಯುತ ಅಡುಗೆ ಎಣ್ಣೆ’ ಪ್ರಸ್ತುತಿ ಮತ್ತು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗದ ಸಹಯೋಗದಲ್ಲಿ ‘ಭೂಮಿಕಾ ಕ್ಲಬ್’ ಮಹಿಳೆಯರ ವಿಶೇಷ ಕಾರ್ಯಕ್ರಮ ಜನವರಿ 18ರಂದು ಮಧ್ಯಾಹ್ನ 2.30ಕ್ಕೆ ಇಲ್ಲಿನ ಜೆಎನ್ಎಂಸಿ ಆವರಣದಲ್ಲಿನ ಕೆಎಲ್ಇ ಶತಮಾನೋತ್ಸವ ಭವನದ ಡಾ. ಬಿ.ಎಸ್.ಕೋಡ್ಕಿಣಿ ಸಭಾಂಗಣದಲ್ಲಿ ನಡೆಯಲಿದೆ.

ಡಾ. ಹೆಬ್ಬಾಳಕರ್ಸ್ ಚರ್ಮ ಮತ್ತು ಕೂದಲು ಕ್ಲಿನಿಕ್ನ ತಜ್ಞ ವೈದ್ಯೆ ಡಾ. ಹಿತಾ ಎಂ. ಹೆಬ್ಬಾಳಕರ ಅವರು ಕಾರ್ಯಕ್ರಮ ಉದ್ಘಾಟಿಸುವರು. ಬೆಳಗಾವಿ ಮೇಯರ್ ಸವಿತಾ ಕಾಂಬಳೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಮಹಾನಗರ ಪಾಲಿಕೆ ಆಯುಕ್ತೆ ಬಿ.ಶುಭ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

‘ಆರೋಗ್ಯ ಅರಿವು’ ಕಾರ್ಯಕ್ರಮದಲ್ಲಿ ‘ಮಹಿಳೆಯರಿಗೆ ಕಾಡುವ ಕ್ಯಾನ್ಸರ್’ ಕುರಿತು ಸ್ತ್ರೀರೋಗ ತಜ್ಞೆ ಡಾ.ಸ್ವಾತಿ ಗೌಡರ ಮತ್ತು ‘ಮಕ್ಕಳಿಗೆ ಕಾಡುವ ಕ್ಯಾನ್ಸರ್’ ಕುರಿತು ಮಕ್ಕಳ ರೋಗ ತಜ್ಞೆ ಡಾ.ಅಭಿಲಾಷಾ ಮಾಹಿತಿ ನೀಡುವರು. ಸ್ಪಂದನಾ ಇವೆಂಟ್ಸ್ನ ಶಾಂತಾ ಆಚಾರ್ಯ ಮತ್ತು ಶೈಲಾ ಭಿಂಗೆ ಮನರಂಜನಾ ಕಾರ್ಯಕ್ರಮ ನಡೆಸಿಕೊಡುವರು. ವಿಶೇಷ ಖಾದ್ಯ ತಯಾರಿಕೆಯೂ ಇರಲಿದೆ.

ಸ್ಪರ್ಧಿಸಿ, ಬಹುಮಾನ ಗೆಲ್ಲಿ: ಮಹಿಳೆಯರಿಗೆಂದೇ ವೈವಿಧ್ಯಮಯ ಸ್ಪರ್ಧೆಗಳು ಕೂಡ ಇರಲಿದೆ. ತಮ್ಮ ಇಷ್ಟದ ಕನ್ನಡದ ಚಲನಚಿತ್ರ ನಟಿಯರ ವೇಷ ಧರಿಸಿಕೊಂಡು ಕಾರ್ಯಕ್ರಮಕ್ಕೆ ಬರಬಹುದು. ಆಕರ್ಷಕ ವೇಷ ಧರಿಸಿ ಬಂದ ಅದೃಷ್ಟಶಾಲಿಗಳಿಗೆ ಅಚ್ಚರಿಯ ಕೊಡುಗೆ ನೀಡಲಾಗುವುದು. ಎಲ್ಲರೂ ಸ್ಪರ್ಧೆ ಹಾಗೂ ಮನರಂಜನೆಗಳಲ್ಲಿ ಪಾಲ್ಗೊಳ್ಳಬಹುದು. ಪ್ರೇಕ್ಷಕರಾಗಿ ಪಾಲ್ಗೊಳ್ಳುವ ಒಬ್ಬ ಅದೃಷ್ಟಶಾಲಿಗೆ ₹ 15 ಸಾವಿರ ಮೌಲ್ಯದ ‘ವಾಟರ್ ಪ್ಯೂರಿಫೈರ್’ ಗೆಲ್ಲುವ ಅವಕಾಶವೂ ಇದೆ.

ಈ ಕಾರ್ಯಕ್ರಮಕ್ಕೆ ಡಾ. ಹೆಬ್ಬಾಳಕರ್ಸ್ ಚರ್ಮ ಮತ್ತು ಕೇಶ ಕ್ಲಿನಿಕ್, ಕೆಎಲ್ಇ ಡಾ. ಸಂಪತ್ ಕುಮಾರ ಎಸ್.ಶಿವಣಗಿ ಕ್ಯಾನ್ಸರ್ ಆಸ್ಪತ್ರೆ ಮತ್ತು ಕೆಜಿಪಿ ಕೈಶಕುಂಜ್ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪ್ರಾಯೋಜಕತ್ವ ಇದೆ.

ಆಸಕ್ತರು 96069 31746 ಸಂಖ್ಯೆಗೆ ಕರೆ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.