ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕೇಶ್ವರ: ಜನರ ನೆರವಿಗೆ ಬಾರದ ಬಿಜೆಪಿ -ಸತೀಶ ಜಾರಕಿಹೊಳಿ

Last Updated 25 ಜುಲೈ 2021, 3:16 IST
ಅಕ್ಷರ ಗಾತ್ರ

ಸಂಕೇಶ್ವರ: ಪಶ್ಚಿಮ ಘಟ್ಟದಲ್ಲಿ ಬೀಳುತ್ತಿರುವ ನಿರಂತರ ಮಳೆ ಹಾಗೂ ಮಹಾರಾಷ್ಟ್ರದ ಚಿತ್ರಿ ಜಲಾಶಯದಿಂದ ನೀರು ಬಿಡುತ್ತಿರುವದರಿಂದ ಹಿರಣ್ಯಕೇಶಿ ನದಿಯ ಪ್ರವಾಹವು ಇನ್ನೂ ಇಳಿದಿಲ್ಲ.ಇದರಿಂದ ನದಿಯು ಉಕ್ಕಿ ಹರಿಯುತಿದ್ದು ಜನ ಮತ್ತು ಜಾನುವಾರುಗಳು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಸಂಕೇಶ್ವರ ಪಟ್ಟಣದ ರೈತ ಸಮುದಾಯವು ಕುಂಬಾರ ಗಲ್ಲಿ, ಹೆದ್ದೂರಶೆಟ್ಟಿ ಗಲ್ಲಿ, ಹರಗಾಪೂರ ಗಲ್ಲಿ, ಮಠ ಗಲ್ಲಿ, ನದಿ ಗಲ್ಲಿಗಳಲ್ಲಿ ವಾಸಿಸುತ್ತಿದೆ. ಜಾನುವಾರಗಳಿಗೆ ಸರ್ಕಾರವು ಗೋಶಾಲೆ ಪ್ರಾರಂಭಿಸಿಲ್ಲ. ಹೀಗಾಗಿ ಅವುಗಳನ್ನು ಮನೆಯಲ್ಲಿ ಬಿಟ್ಟು ಹೊರ ಬರಲು ಇಲ್ಲಿನ ಜನರು ಒಪ್ಪುತ್ತಿಲ್ಲ. ಹೀಗಾಗಿ ರಕ್ಷಣಾ ಕಾರ್ಯಕ್ಕೆ ಬಂದಿರುವ ಎಸ್.ಡಿ.ಆರ್.ಎಫ್ ತಂಡಕ್ಕೆ ಏನು ಮಾಡಬೇಕೆಂಬುದು ತಿಳಿಯುತ್ತಿಲ್ಲ.

ಬಿಜೆಪಿ ಕಚ್ಚಾಟ: ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಮಾಜಿ ಸಚಿವ ಎ.ಬಿ.ಪಾಟೀಲ, ಚಿಕ್ಕೋಡಿ ವಿಭಾಗದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮುಂತಾದವರನ್ನು ಒಳಗೊಂಡ ಕಾಂಗ್ರೆಸ್ ಪಕ್ಷದ ನಿಯೋಗ ಭೇಟಿ ನೀಡಿ ಪರಿಶೀಲಿಸಿದರು. ಕಷ್ಟದ ಪರಿಸ್ಥಿತಿಯಲ್ಲಿ ಜನರ ನೆರವಿಗೆ ಬರಬೇಕಾಗಿದ್ದ ಬಿಜೆಪಿ ಸರ್ಕಾರ, ಕೈಕಟ್ಟಿ ಕುಳಿತಿದೆ. ಅವರಿಗೆ ಅಧಿಕಾರ ಮುಖ್ಯವಾಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT