ಶನಿವಾರ, ಮೇ 21, 2022
28 °C

ಚಿಕ್ಕೋಡಿ: ಬಾವಿಗೆ ಬಿದ್ದಿದ್ದ ಎಮ್ಮೆ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿ ಕಾಲು ಜಾರಿ ಆಳವಾದ ಬಾವಿಗೆ ಬಿದ್ದಿದ್ದ ಎಮ್ಮೆವೊಂದನ್ನು ಇಲ್ಲಿನ ಅಗ್ನಿ ಶಾಮಕದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ತಾಲ್ಲೂನ ನಾಗರಾಳ ಗ್ರಾಮದ ಮಾರ್ತಂಡ ಧಮಕೆ ಅವರಿಗೆ ಸೇರಿದ ಎಮ್ಮೆ ಇದಾಗಿತ್ತು. ಅವರ ತೋಟದಲ್ಲಿ ಮರಕ್ಕೆ ಕಟ್ಟಿ ಹಾಕಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಆಳವಾದ ಬಾವಿಗೆ ಬಿದ್ದಿತ್ತು.

ಎಮ್ಮೆ ರಕ್ಷಣೆ ಮಾಡುವಂತೆ ಮಾಲಿಕ ಅಗ್ನಿಶಾಮಕ ದಳದವರಿಗೆ ಕರೆ ಮಾಡಿದಾಗ ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರ ಸಹಕಾರದೊಂದಿಗೆ ಎಮ್ಮೆಯನ್ನು ರಕ್ಷಣೆ ಮಾಡಿದ್ದಾರೆ.

ಅಗ್ನಿಶಾಮಕ ಪ್ರಭಾರಿ ಅಧಿಕಾರಿ ರಾಜೇಂದ್ರ ಪಾಟೀಲ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಗಪ್ಪ ಪಾಟೀಲ, ಮನೋಹರ ಬೀಳಮರಿ, ದುಂಡಪ್ಪ ಬಾಡಕರ, ಬಾಬು ಗೌರಾಜ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು