ಬೆಳಗಾವಿ: ‘ದೇಶಪಾಂಡೆ ಪ್ರತಿಷ್ಠಾನದಿಂದ ಸಣ್ಣ ಉದ್ದಿಮೆದಾರರನ್ನು ಪ್ರೋತ್ಸಾಹಿಸುವುದಕ್ಕಾಗಿ ಜ. 8 ರಿಂದ 11ರವರೆಗೆ ಇಲ್ಲಿನ ನೆಹರೂ ನಗರದ ಎಪಿಎಂಸಿ ರಸ್ತೆಯಲ್ಲಿರುವ ಬಸವಣ್ಣ ಮಹಾದೇವ ಮಂದಿರದಲ್ಲಿ ‘ಉದ್ಯಮಿ ಸಂತೆ’ ಆಯೋಜಿಸಲಾಗಿದೆ’ ಎಂದು ಯೋಜನಾ ವ್ಯವಸ್ಥಾಪಕ ವೀರಯ್ಯ ಹಿರೇಮಠ ತಿಳಿಸಿದರು.

‘ಬೆಳಿಗ್ಗೆ 10.30ರಿಂದ ರಾತ್ರಿ 9ವರೆಗೆ ಸಂತೆಯು ಸಾರ್ವಜನಿಕರಿಗೆ ಮುಕ್ತವಿರುತ್ತದೆ. ಆಹಾರ ಪದಾರ್ಥಗಳು, ಸಾವಯವ ಉತ್ಪನ್ನಗಳು, ಸಿರಿಧಾನ್ಯಗಳು, ಕೈಮಗ್ಗದ ಸೀರೆಗಳು ಮತ್ತು ಉಡುಪುಗಳು, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘40 ಮಂದಿ ಸಣ್ಣ ಉದ್ಯಮಿಗಳು ನೋಂದಾಯಿಸಿದ್ದಾರೆ. ಅವರನ್ನು ಪ್ರೋತ್ಸಾಹಿಸುವ ಜೊತೆಗೆ ಗ್ರಾಹಕರಿಗೆ ನೇರವಾಗಿ ಮಾರುಕಟ್ಟೆ ಒದಗಿಸಲು ಪ್ರತಿಷ್ಠಾನದಿಂದ ಈ ಉಪಕ್ರಮವನ್ನು ಅನುಷ್ಠಾನಕ್ಕೆ ತರಲಾಗಿದೆ. ಸಾರ್ವಜನಿಕರು, ಸ್ಥಳೀಯರು ತಯಾರಿಸಿದ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.

‘8ರಂದು ಸಂಜೆ 4ಕ್ಕೆ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಉದ್ಘಾಟಿಸುವರು. ಎಸ್ಬಿಐ ಎಫ್ಐಎಂಎಂ ಪ್ರಾದೇಶಿಕ ವ್ಯವಸ್ಥಾಪಕ ಜಿ. ನರಸಿಂಹಮೂರ್ತಿ, ಉದ್ಯಮಿಗಳಾದ ರಾಜೇಂದ್ರ ಬೆಳಗಾವಂಕರ ಹಾಗೂ ಅಮಿತ್ ಕಾಲಕುಂದ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ:9060555509 ಸಂಪರ್ಕಿಸಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.