ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ: ಸೇವೆಯಲ್ಲಿರುವಾಗಲೇ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೊಳಗಾದ ಮೊದಲ ಮಹಿಳಾ ಕಾನ್‌ಸ್ಟೇಬಲ್

Last Updated 26 ಮೇ 2018, 4:59 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಮಹಿಳಾ ಕಾನ್‌ಸ್ಟೇಬಲ್‌ ಒಬ್ಬರು ಸೇವೆಯಲ್ಲಿರುವಾಗಲೇ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಇತಿಹಾಸ ಸೃಷ್ಠಿಸಿದ್ದಾರೆ.

ಮುಂಬೈನಲ್ಲಿರುವ ಸೇಂಟ್ ಜಾರ್ಜ್ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಶಸ್ತ್ರಚಿಕಿತ್ಸೆಗೊಳಗಾದ ಲಲಿತಾ ಸೇಲ್ವ್ ಅವರು ಲಿಂಗ ಬದಲಾವಣೆ ಮಾಡಿಕೊಂಡ ಮೊದಲ ಮಹಿಳಾ ‍ಕಾನ್‌ಸ್ಟೇಬಲ್ ಆಗಿದ್ದಾರೆ.

ಲಲಿತಾ ಸೇಲ್ವ್‌ರ ಹೆಸರು ಶಸ್ತ್ರಚಿಕಿತ್ಸೆ ತರುವಾಯ ‘ಲಲಿತ್ ಸೇಲ್ವ್’ ಆಗಿ ಬದಲಾಗಿದೆ. ಇವರು ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿನ ಮರಾಠ್‌ವಾಡ ವಲಯದ ಮಜಲ್‌ಗಾವ್‌ನಲ್ಲಿ ವಾಸವಾಗಿದ್ದಾರೆ.

‘ಲಿಂಗ ಬದಲಾವಣೆಯ ಮೊದಲ ಹಂತದ ಶಸ್ತ್ರಚಿಕಿತ್ಸೆ ಮುಗಿದಿದೆ. ಎರಡನೇ ಹಂತದ ಶಸ್ತ್ರಚಿಕಿತ್ಸೆಯನ್ನು ಆರು ತಿಂಗಳ ನಂತರ ನಡೆಸಲಾಗುತ್ತದೆ’ ಎಂದು ಡಾ.ರಜತ್ ಕಪೂರ್ ತಿಳಿಸಿದ್ದಾರೆ.

ಲಲಿತಾ ಅವರು ಕಳೆದ ವರ್ಷ ಈ ಬಗ್ಗೆ ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜತೆಗೆ ಈ ಶಸ್ತ್ರಚಿಕಿತ್ಸೆಯ ಖರ್ಚು ವೆಚ್ಚವನ್ನು ಸರ್ಕಾರ ಹೊತ್ತುಕೊಳ್ಳಲು ಮತ್ತು ರಜೆ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಮನವಿ ಮಾಡಿಕೊಂಡಿದ್ದರು.

ಲಲಿತಾ ಅವರ ಈ ನಿರ್ಧಾರಕ್ಕೆ ಬೆಂಬಲವಾಗಿ ನಿಂತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಲಲಿತಾ ಅವರ ಅರ್ಜಿಯನ್ನು ಪರಿಗಣಿಸುವಂತೆ ಪೊಲೀಸರಿಗೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT