ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್‌– ಬೈಕ್‌ ಡಿಕ್ಕಿ: ಯುವತಿಗೆ ತೀವ್ರ ಗಾಯ

Published 3 ಜನವರಿ 2024, 16:54 IST
Last Updated 3 ಜನವರಿ 2024, 16:54 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ರೈಲ್ವೆ ಮೂರನೇ ಗೇಟ್‌ ಬಳಿ ಸೋಮವಾರ ಕಾರೊಂದು ವೇಗವಾಗಿ ಬಂದು ಬೈಕಿಗೆ ಡಿಕ್ಕಿ ಹೊಡೆದ ಕಾರಣ, ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಹಾವೀರ ನಗರದ ನಿವಾಸಿ ದಿವ್ಯಾ ಸಂಜಯ ಪಾಟೀಲ ಗಾಯಗೊಂಡವರು. ಯುವತಿ ತಮ್ಮ ಬೈಕಿನಲ್ಲಿ ಮೂರನೇ ರೈಲ್ವೆ ಗೇಟ್‌ನಿಂದ ಪೀರನವಾಡಿ ಕಡೆಗೆ ಹೊರಟಿದ್ದರು. ಜೋಡಿ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ಬೈಕಿಗೆ ಗುದ್ದಿತು. ಅಪಘಾತದ ರಭಸಕ್ಕೆ ಯುವತಿ ಬೈಕ್‌ ಎತ್ತರಕ್ಕೆ ಹಾರಿ ನೆಲಕ್ಕೆ ಬಿತ್ತು. ಇದರಿಂದ ಯುವತಿ ತೀವ್ರ ಗಾಯಗೊಂಡರು. ಅಪಘಾತದ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಯುವತಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್‌ ಚಾಲಕ ಭರತ ಮಹದೇವ ಚೌಗುಲೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT